ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕನ್ನಡ ಸಂಘದ ವತಿಯಿಂದ ಬಿ.ಬಿ.ಎಂ.ಪಿ.ಕೇಂದ್ರ ಕಛೇರಿ ಅವರಣದಲ್ಲಿ ನಗರ ದೇವತೆ ಅಣ್ಣಮ್ಮ ದೇವಿ ಉತ್ಸವ ಮತ್ತು 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. 66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಚಲನಚಿತ್ರ ಕಲಾವಿದರಿಗೆ ಮತ್ತು ಕನ್ನಡ ಪರ ಹೋರಾಟಗಾರರಿಗೆ ಸನ್ಮಾನ ಮಾಡಲಾಯತು.
ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ. ನಮ್ಮ ಆಡಳಿತ ವ್ಯವಹಾರ ಸಂಪೂರ್ಣ ಕನ್ನಡದಲ್ಲಿ ನಡೆಯುತ್ತದೆ . ಕನ್ನಡ ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬರು ಕನ್ನಡ ಬಳಸಿ, ಬೆಳಸಬೇಕು . ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ನಮ್ಮ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಇದರಿಂದ ತಿಳಿಯುತ್ತದೆ ಕನ್ನಡ ಭಾಷೆ ಸರಳ ಸುಂದರ, ಸಂಸ್ಕೃತಿವುಳ್ಳ ಭಾಷೆ ಎಂದು. ಎಲ್ಲರು ಕನ್ನಡ ಬಳಸಿ, ಬೆಳಸಿ ಎಂದು ಹೇಳಿದರು.