ಚಿಕ್ಕಬಳ್ಳಾಪುರ: ಒಂದೆಡೆ ಚಳಿಗಾಲ.. ಮತ್ತೊಂದೆಡೆ ಸೈಕ್ಲೋನ್ ನಿಂದಾಗಿ ಜಿಟಿಜಿಟಿ ಮಳೆ. ಇದೆಲ್ಲದರಿಂದ ನುಗ್ಗೆಕಾಯಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಚಳಿಗಾಲಕ್ಕೆ ನುಗ್ಗರಕಾಯಿ ತಿನ್ನುವುದರಿಂದ ದೇಹಕ್ಕೆ ಒಂದಷ್ಟು ವಿಟಮಿನ್ ಗಳು ಸಿಗುತ್ತವೆ. ಇದರಿಂದ ಶೀತ, ನೆಗಡಿಯಿಂದ ದೂರ ಇರಬಹುದು. ಹೆಚ್ಚು ಶೀತಗಾಳಿ ಬೀಸುತ್ತಿರುವ ಕಾರಣ ಜನ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಹೀಗಾಗಿ ನುಗ್ಗೆಕಾಯಿ ಮೊರೆ ಹೋಗುತ್ತಿದ್ದಾರೆ.
ವಿಟಮಿನ್ ಸಿ ಹೆಚ್ಚಾಗಿರುವ ನುಗ್ಗೆಕಾಯಿಗೂ ಬಂತು ಫುಲ್ ಡಿಮ್ಯಾಂಡ್. ಒಂದು ಕೆಜಿ ನುಗ್ಗೆಕಾಯಿ ಬೆಲೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ. ಚಿಕ್ಕಬಳ್ಳಾಪುರದ ಭಾಗದಲ್ಲಿ ಹೆಚ್ಚು ನುಗ್ಗೆ ಕಾಯಿ ಬೆಳೆಯುತ್ತಾರಡ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಲ್ಲಿಯೂ ನುಗ್ಗೆಕಾಯಿ ಸಿಗುತ್ತಿಲ್ಲ. ಬಾಂಬೆ ಕಡೆಯಿಂದ ನುಗ್ಗೆಕಾಯಿ ತರಿಸಿ ಮಾರಾಟ ಮಾಡುತ್ತಿದ್ದಾರೆ.
ನುಗ್ಗೆಕಾಯಿ ತಿನ್ನುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಹೀಗಾಗಿ ಈಗಿನ ವಾತಾವರಣಕ್ಕೆ ನುಗ್ಗೆಕಾಯಿ ಉತ್ತಮ ಎಂದು ಎಲ್ಲರೂ ನುಗ್ಗೆಕಾಯಿ ಕೇಳುವವರು ಜಾಸ್ತಿಯಾಗಿದ್ದಾರೆ. ಬೇರೆ ಕಡೆಯಿಂದ 350 ಕೊಟ್ಟು, ತಂದುಕೊಡುವವರಿಗೆ 100 ರೂಪಾಯಿ ಕೊಟ್ಟು, ನಾರಾಟ ಮಾಡುವಾಗ 500 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿದಿನ ಕೂಡ 100-150 ಕೆಜಿ ಮಾರಾಟವಾಗುತ್ತಿದೆ. ಒಂದು ನುಗ್ಗೆಕಾಯಿ ಬೆಲೆ 3032 ರೂಪಾಯಿ ಆದರೂ ಜನ ನುಗ್ಗೆಕಾಯಿ ಖರೀದಿ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.
ಒಂದು ಕಡೆ ನುಗ್ಗೆಕಾಯಿ ಬೇಡಿಕೆ ಹೆಚ್ಚಾಗಿ, ಬೆಲೆ ಜಾಸ್ತಿಯಾದರೆ ಟೊಮೋಟೋ ಬೆಳೆಗಾರರದ್ದೇ ಚಿಂತೆಯಾಗಿದೆ. ಈ ಚಳಿಯ ವಾತಾವರಣದಿಂದ ಟಮೋಟೊ ಬೆಳೆ ಹಣ್ಣಾಗುತ್ತಿಲ್ಲ. ಮಾರುಕಟ್ಟೆಗೆ ಕಾಯಿ ಟೋಮೋಟೊ ತಂದರೆ ಯಾರೂ ತೆಗೆದುಕೊಳ್ಳುತ್ತಿಲ್ಲ. ಇಂಥ ಸಂಕಟದಲ್ಲಿ ಟಮೋಟೋ ಬೆಳೆಗಾರರು ಸಿಲುಕಿದ್ದಾರೆ. ಮಳೆಯಿಂದಾಗಿ ರೈತರ ಪಾಡು ನೋಡಲಾಗುತ್ತಿಲ್ಲ.