ಬೆಂಗಳೂರು: ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಆದರೆ ಸದ್ಯಕ್ಕೆ ಶಕ್ತಿ ಯೋಜನೆ ಜಾರಿಗೆ ಬಂದಿದ್ದು, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದೆ. ಇದರ ನಡುವೆ ಗೃಹಲಕ್ಷ್ಮೀ ಯೋಜನೆ ಯಾವಾಗಿಂದ ಎಂಬ ಪ್ರಶ್ನೆ ಎಲ್ಲಾ ಮಹಿಳೆಯರನ್ನು ಕಾಡುತ್ತಿದೆ.
ಈಗಾಗಲೇ ಜೂನ್ 15 ರಿಂದಾನೇ ನೋಂದಣಿ ಆರಂಭ ಎಂದು ಹೇಳಲಾಗಿತ್ತು. ಆದರೆ ಸರ್ಕಾರ ಈ ಯೋಜನೆಯ ಅರ್ಜಿ ಸಲ್ಲಿಕೆಯನ್ನು ಮುಂದೂಡಿಕೊಂಡೆ ಬರುತ್ತಿದೆ. ಕಾಯುತ್ತಿರುವ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಇನ್ನು ತಡವಾಗುವ ಸಾಧ್ಯತೆ ಇದೆ. ಇನ್ನೂ ಎರಡು ವಾರಗಳ ಕಾಲ ಈ ಯೋಜನೆ ತಡವಾಗುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಕೆಗೆ ಬೇಕಾಗಿರುವಂತ ಸಾಫ್ಟ್‌ವೇರ್ ಇನ್ನು ಪೂರ್ಣಗೊಂಡಿಲ್ಲ. ಕಾಮಗಾರಿಯಲ್ಲಿಯೇ ಇದೆ ಎನ್ನಲಾಗುತ್ತಿದೆ.
ಇನ್ನು ಈ ಯೋಜನೆಯ ಫಲಾನುಭವಿಗಳು ಎರಡು ಕೋಟಿ ಮಹಿಳೆಯರಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೂಡ ಮನೆಯ ಯಜಮಾನಿಯರ ಸಂಖ್ಯೆಯ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದೆ. ಹೀಗಾಗಿ ಯೋಜನೆ ಇನ್ನೂ ತಡವಾಗುತ್ತಿದೆ. ಮಾಹಿತಿ ಪ್ರಕಾರ ಇನ್ನೆರಡು ವಾರದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಅವಕಾಶ ಸಿಗಬಹುದು.