ಹಾಸನ: ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆಯ ದೇಗುಲ ಇಂದಿನಿಂದ ಮತ್ತೆ ಆರಂಭವಾಗಿದೆ. ಇಂದು ಹಾಸನಾಂಬೆಯ ದೇಗುಲದ ಬಾಗಿಲು ತೆಗೆಯಲಿದ್ದು, ವಿಶೇಷ ಪೂಜಾ ಕೈಕಂರ್ಯ ನೆರವೇರಲಿದೆ. ಹಾಸನಾಂಬೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಲಕ್ಷಾಂತರ ಮಂದಿ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಇಂದಿನಿಂದ ಭಕ್ತರಿಗೆ ತಾಯಿ ದರ್ಶನ ಕೊಡಲಿದ್ದಾಳೆ.
ರಾತ್ರಿಯೇ ದೇವಾಲಯದಲ್ಲಿ ಎಲ್ಲಾ ತಯಾರಿ ನಡೆದಿದೆ. ಸಂಪ್ರದಾಯದ ಪ್ರಕಾರ ಹಾಸನಾಂಬ ದೇವಿಯ ವಸ್ತುಗಳ ಶುಚಿ ಕಾರ್ಯ ನಡೆದಿದೆ. ಹಾಸನದ ಹುಣಸಿನಕೆರೆಯಲ್ಲಿ ದೇವಿಯ ವಸ್ತ್ರಗಳನ್ನು ಮಡಿವಾಳ ಸಮುದಾಯದವರು ಶುಚಿಗೊಳಿಸುತ್ತಾರೆ. ಬಳಿಕ ಆ ವಸ್ತ್ರಗಳನ್ನು ಹಾದನಾಂಬೆ ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದ ತಂಡ ಜೋಡಿಸಿಟ್ಟುಕೊಂಡಿದೆ. ಒಟ್ಟಾರೆ, ಸರ್ವಾಲಂಕಾರ ಭೂಚಿತ ದೇವಿ ಕಣ್ತುಂಬಿಕೊಳ್ಳಲು ಭಕ್ತರು ಸಜ್ಜಾಗಿದ್ದು, ಗರ್ಭಗುಡಿಯ ಆರದ ದೀಪವನ್ನು ಕಾಣಲು ಭಕ್ತಕೋಟಿ ಕಾತರದಿಂದ ಕಾಯುತ್ತಿದೆ. ನಾನಾ ಭಾಗಗಳಿಂದ ದೇವಸ್ಥಾನಕ್ಕೆ ಭಕ್ತರು ಬರುವ ಕಾರಣ, ದೇವಾಲಯದಲ್ಲಿ ಬಿಗಿ ಭದ್ರತೆಯನ್ನ ಒದಗಿಸಲಾಗುತ್ತದೆ. ದೇವಸ್ಥಾನವನ್ನು ಅಲಂಕಾರ ಮಾಡಿರುತ್ತಾರೆ. ಭಕ್ತರಲ್ಲಿ ಸರಾಗವಾಗಿ ದೇವಿಯ ದರ್ಶನ ಮಾಡುವುದಕ್ಕೆ, ಯಾವುದೇ ನೂಕಾಟವಿಲ್ಲದಂತೆ ಸ್ಥಳೀಯ ಪೊಲೀಸರು ಗಮನ ಹರಿಸಿದ್ದಾರೆ. ಬ್ಯಾರಿಕೇಡ್ ಗಳನ್ನೆಲ್ಲಾ ಹಾಕಿ ಭದ್ರತೆಯನ್ನು ಒದಗಿಸಲಾಗಿದೆ.
ಹಾಸನಾಂಬೆ ತಾಯಿಯ ಗರ್ಭಗುಡಿ ಇಂದಿನಿಂದ ಅಕ್ಟೋಬರ್ 23ರವರೆಗೆ ತೆರೆದಿರಲಿದೆ. ಒಂದು ತಿಂಗಳ ಕಾಲ ತಾಯಿಯ ದರ್ಶನ ಭಾಗ್ಯ ಭಕ್ತರಿಗೆ ಸಿಗಲಿದೆ. ಇವತ್ತು ಮತ್ತು 23ರಂದು ಸಾವರ್ಜನಿಕರಿಗೆ ತಾಯಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಈಗಾಗಲೇ ಹಾಸನಾಂಬೆಗೆ ವಿಶೇಷ ಪೂನಾ ಕೈಂಕರ್ಯಗಳು ಆರಂಭವಾಗಿದೆ. ರಾತ್ರಿಯಿಂದ ಬೆಳಗಿನ ಜಾವ ವಿಶರೆಷ ಪೂಜೆ ನೆರವೇರಿದೆ. ಇಂದು ಮಧ್ಯಾಹ್ನ 12 ರಿಂದ 12.30ರ ಒಳಗೆ ದೇಗುಲದ ಬಾಗಿಲು ತೆಗೆಯಲಿದ್ದಾರೆ.






