Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೋಟರಿ ಸಂಸ್ಥೆಗಳಿಂದ 35 ಶಿಕ್ಷಕರುಗಳಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.24 : ದೇಶದ ಚಿತ್ರಣ ಬದಲಾಗಬೇಕಾದರೆ ಶಿಕ್ಷಕರುಗಳ ಪಾತ್ರ ದೊಡ್ಡದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಚೇರಿ ವಿದ್ಯಾಧಿಕಾರಿ ಟಿ.ಆರ್.ತಿಪ್ಪೇಸ್ವಾಮಿ ಹೇಳಿದರು.

ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ಮೆದೆಹಳ್ಳಿ ರಸ್ತೆಯಲ್ಲಿರುವ ವೈ.ಆರ್. ಆದಿಶೇಷ ರೋಟರಿ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 35 ಶಿಕ್ಷಕರುಗಳಿಗೆ ನೇಷನ್ ಬಿಲ್ಡರ್ ಅವಾರ್ಡ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗದಲ್ಲಿ ಯಾವುದೇ ನೀರಾವರಿ, ಕೈಗಾರಿಕೆ ಸೌಲಭ್ಯವಿಲ್ಲ. ದೊಡ್ಡ ವ್ಯಾಪಾರ ವಹಿವಾಟು ನಡೆಯುವ ಸ್ಥಳವೂ ಅಲ್ಲ. ಹಾಗಾಗಿ ವಿದ್ಯೆಗೆ ಹೆಚ್ಚಿನ ಆದ್ಯತೆ ಕೊಡಬೇಕಿದೆ. ಶಿಕ್ಷಣದಿಂದ ಮಾತ್ರ ಪರಿವರ್ತನೆ ಸಾಧ್ಯ ಎನ್ನುವುದು ಶಿಕ್ಷಕರುಗಳಿಗೂ ಮನವರಿಕೆಯಾಗಿರುವುದರಿಂದ ಬಹುಪಾಲು ಶಿಕ್ಷಕರ ಮಕ್ಕಳು ಇಂಜಿನಿಯರಿಂಗ್, ಮೆಡಿಕಲ್ ವ್ಯಾಸಂಗ ಮಾಡುತ್ತಿರುವುದು ಹರ್ಷದಾಯಕ ಎಂದು ಸಂತಸ ವ್ಯಕ್ತಪಡಿಸಿದರು.

ರೋಟರಿ ಸಂಸ್ಥೆ ಶಿಕ್ಷಕರ ಪ್ರಾಮುಖ್ಯತೆಯನ್ನು ಗುರುತಿಸಿ ಪ್ರತಿ ವರ್ಷವೂ ಅತ್ಯುತ್ತಮ ಶಿಕ್ಷಕರುಗಳನ್ನು ಆಯ್ಕೆ ಮಾಡಿ ನೇಷನ್ ಬಿಲ್ಡರ್ ಅವಾರ್ಡ್ ನೀಡಿ ಸನ್ಮಾನಿಸಿಕೊಂಡು ಬರುತ್ತಿರುವುದು ಒಳ್ಳೆಯದು. ಇದರಿಂದ ಶಿಕ್ಷಕರುಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದಂತಾಗುತ್ತದೆ. ಅದಕ್ಕಾಗಿ ಶಿಕ್ಷಕರುಗಳು ವೃತ್ತಿಪರತೆ ಹೆಚ್ಚಿಸಿಕೊಂಡು ಪಠ್ಯದ ಜೊತೆ ಮಕ್ಕಳಿಗೆ ಜೀವನಕ್ಕೆ ಅತ್ಯವಶ್ಯಕವಾಗಿರುವ ಕೌಶಲ್ಯದ ಶಿಕ್ಷಣವನ್ನು ನೀಡಬೇಕು. ಶಿಕ್ಷಕರುಗಳನ್ನು ಗುರುತಿಸಿ ಸನ್ಮಾನ ಮಾಡಿದರೆ ಇಡಿ ಸಮಾಜವನ್ನು ಗೌರವಿಸಿದಂತೆ. ಸಮಾಜ ಔನ್ಯತೆ ಸಾಧಿಸಬೇಕಾದರೆ ಶಿಕ್ಷಕರುಗಳನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತೆಗೆಯುವವರು ಶಿಕ್ಷಕರುಗಳು ಮಾತ್ರ ಎಂದು ಗುರುವಿನ ಮಹತ್ವ ತಿಳಿಸಿದರು.

ಜಿಲ್ಲೆಯಲ್ಲಿ ಶಿಕ್ಷಕರುಗಳ ಕೊರತೆಯಿದೆ. ಅದನ್ನು ನೀಗಿಸುವ ಕೆಲಸ ಸರ್ಕಾರ ಮಾಡುತ್ತದೆ. ಆರು ನೂರು ಅತಿಥಿ ಶಿಕ್ಷಕರುಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೌಶಲ್ಯ ಹೆಚ್ಚಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಬೇಕು ಎಂದು ಹೇಳಿದರು.
ರೊ.ರವೀಂದ್ರ ಎಂ.ಕೆ. ಮಾತನಾಡಿ 1905 ಫೆ.23 ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ಆರಂಭಗೊಂಡ ರೋಟರಿ ಸಂಸ್ಥೆ ಹದಿನಾಲ್ಕು ಲಕ್ಷ ಸದಸ್ಯರುಗಳನ್ನು ಹೊಂದಿದ್ದು, 250 ಕ್ಕೂ ಹೆಚ್ಚು ದೇಶಗಳಲ್ಲಿ 40 ಸಾವಿರಕ್ಕೂ ಅಧಿಕ ಸಂಸ್ಥೆಗಳನ್ನು ಕಟ್ಟಿದೆ. 1985 ರಲ್ಲಿ ಪೋಲಿಯೋ ನಿರ್ಮೂಲನೆಗೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದೆ.

ಈಗ ಪಾಕಿಸ್ತಾನ ಮತ್ತು ಆಪ್ಘಾನಿಸ್ತಾನದಲ್ಲಿ ಮಾತ್ರ ಇನ್ನು ಪೋಲಿಯೋ ಹತೋಟಿಗೆ ಬಂದಿಲ್ಲ. ಶೇ.26 ಪರ್ಸೆಂಟ್ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತ ಬರುತ್ತಿದೆ ಎಂದರು.
ಶಾಲೆ ಬಿಟ್ಟ ಮಕ್ಕಳನ್ನು ಪುನಃ ಮರಳಿ ಶಾಲೆಗೆ ಕರೆತರುವಲ್ಲಿ ರೋಟರಿ ಸಂಸ್ಥೆ ಶ್ರಮಿಸುತ್ತಿದೆ. ಹ್ಯಾಪಿ ಶಾಲೆ ಮೂಲಕ ಶಿಕ್ಷಕರುಗಳನ್ನು ಉತ್ತೇಜಿಸುತ್ತಿದೆ. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗಬೇಕೆನ್ನುವುದು ಸಂಸ್ಥೆಯ ಉದ್ದೇಶ ಎಂದು ಹೇಳಿದರು.

ರೋ. ಮಾಧುರಿ ಮಧುಪ್ರಸಾದ್ ಕೆ. ಮಾತನಾಡುತ್ತ ಗುರುಗಳಿಗೆ ವಿಶೇಷವಾದ ಸ್ಥಾನಮಾನವಿದೆ. ಅದಕ್ಕಾಗಿಯೇ ಇಡಿ ವಿಶ್ವ ಭಾರತದ ಕಡೆ ನೋಡುತ್ತಿದೆ. ಒಂದು ದೇಶದ ಭವಿಷ್ಯ ಮಕ್ಕಳ ಮೇಲೆ ನಿಂತಿದೆ. ಮಕ್ಕಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಶಿಕ್ಷಕರು ಹಾಗೂ ಪೋಷಕರುಗಳ ಪಾತ್ರ ಅತಿ ಮುಖ್ಯ. ಶಿಕ್ಷಕರುಗಳನ್ನು ಸನ್ಮಾನಿಸುವುದು ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸ. ಇದರಿಂದ ಶಿಕ್ಷಣದ ಮಟ್ಟವನ್ನು ಹೆಚ್ಚಿಸಿದಂತಾಗುತ್ತದೆ. ಶಿಕ್ಷಣದಿಂದ ಮಾತ್ರ ಬಡವ-ಶ್ರೀಮಂತ ಎನ್ನುವ ತಾರತಮ್ಯವನ್ನು ಹೋಗಲಾಡಿಸಬಹುದು ಎಂದು ನುಡಿದರು.

ರೊ.ವಿಶ್ವಜಿತ್ ಕೆ.ಜಾದವ್, ಶ್ರೀಮತಿ ಶ್ರೀಲತ ದೊಂತಿ, ರೊ.ಉಮೇಶ್ ವೀರಣ್ಣ ತುಪ್ಪದ್, ಶ್ರೀಮತಿ ಸುಧಾ ಗೋವಿಂದರಾಜು, ರೊ.ಶಶಿಧರ ಗುಪ್ತ, ರೊ.ರಾಘವೇಂದ್ರ ಎಂ.ಜೆ. ಶ್ರೀಮತಿ ನಂದಿನಿ ರಾಘವೇಂದ್ರ, ರೊ.ಗಿರೀಶ್ ಎಂ. ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೀಟರ್ ಬಳಸದೆಯೇ‌ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರುವಂತೆ ಮಾಡಬಹುದು..!

ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಅತ್ಯಧಿಕವಾಗಿ ಸುರಿದ ಪರಿಣಾಮ ಈ ಬಾರಿ ಚಳಿಯೂ ಜಾಸ್ತಿ ಇರಲಿದೆ. ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿರಲಿದೆ. ಈಗಾಗಲೇ ಚಳಿಗಾಲ ಶುರುವಾಗಿದೆ ಕೂಡ. ಚಳಿಗಾಲದಲ್ಲಿ ಮನೆಯೆಲ್ಲಾ ತಂಪಾಗಿರುತ್ತದೆ. ಕೆಲವೊಬ್ಬರಿಗೆ

ಹರ್ನಿಯಾ ಎಂದರೇನು ? ಸಮಸ್ಯೆಗಳು, ಲಕ್ಷಣಗಳು ಮತ್ತು ಪರಿಹಾರ : ಇಲ್ಲಿದೆ ಸಂಪೂರ್ಣ ಮಾಹಿತಿ…!

ಸುದ್ದಿಒನ್ | ಹರ್ನಿಯಾ ಎನ್ನುವುದು ಹೊಟ್ಟೆಯ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ವೈದ್ಯಕೀಯ ಸ್ಥಿತಿಯಾಗಿದ್ದು, ಹೊಟ್ಟೆಯ ಭಾಗದ ಅಂಗಗಳು ಸ್ನಾಯು ಅಥವಾ ಅಂಗಾಂಗಗಳ ನಡುವೆ ತೂರಿಕೊಂಡು ಚರ್ಮದ ಕೆಳ ಭಾಗದಲ್ಲಿ ಬಲೂನಿನಂತೆ ಊದಿಕೊಂಡು ಅಥವಾ

ಈ ರಾಶಿಯವರು ಶತ್ರುಗಳ ಒಳಸಂಚುಗಳಿಗೆ ಪ್ರತ್ಯುತ್ತರ ನೀಡಿ

ಈ ರಾಶಿಯವರು ಶತ್ರುಗಳ ಒಳಸಂಚುಗಳಿಗೆ ಪ್ರತ್ಯುತ್ತರ ನೀಡಿ, ಈ ರಾಶಿಯವರ ಪರಸ್ತ್ರೀ-ಪುರುಷ ಸಹವಾಸದಿಂದ ಕುಟುಂಬದಲ್ಲಿ ಕಲಹ, ಭಾನುವಾರ- ರಾಶಿ ಭವಿಷ್ಯ ನವೆಂಬರ್-24,2024 ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

error: Content is protected !!