Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಇನ್ಮುಂದೆ SSLC ಫಲಿತಾಂಶ 625 ಅಲ್ಲ 525 : ಹಿಂದಿ ಭಾಷೆಯ ಅಂಕ ಲೆಕ್ಕಕ್ಕಿಲ್ಲ..!

---Advertisement---

ಬೆಂಗಳೂರು: ಎಸ್ಎಸ್ಎಲ್ಸಿ ಮಕ್ಕಳಿಗೆ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ವಿಷಯವೊಂದನ್ನ ತಿಳಿಸಿದ್ದಾರೆ. ಇದುವರೆಗೂ ಎಸ್ಎಸ್ಎಲ್ಸಿ ಪರೀಕ್ಷೆಯು ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಈ ವರ್ಷದಿಂದ ಇದನ್ನ 525 ಅಂಕಗಳಿಗೆ ಸೀಮಿತಗೊಳಿಸಲಾಗಿದೆ. ತೃತೀಯ ಭಾಷೆ ಅಂದ್ರೆ ಹಿಂದಿ ಭಾಷೆಯ ಅಂಕಗಳನ್ನ ಒಟ್ಟು ಮೊತ್ತದಿಂದ ಹೊರಗೆ ಬಿಡಲಾಗಿದೆ ಎಂಬ ಮಾಹಿತಿಯನ್ನ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ಹಿಂದಿ ಮಾತ್ರವಲ್ಲ ತೃತೀಯ ಭಾಷೆಯಲ್ಲಿ ಬರುವ ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠು ಸೇರಿದಂತೆ ತೃತೀಯ ಭಾಷೆಯಾಗಿ ತೆಗೆದುಕೊಂಡ ಎಲ್ಲಾ ಭಾಷೆಗಳ ಪರೀಕ್ಷೆ ನಡೆಯಲಿದೆ. ಅಂಕಗಳನ್ನು ಪರಿಗಣಿಸದಿದ್ದರೂ ವಿದ್ಯಾರ್ಥಿಗಳು ತೃತೀಯ ಭಾಷೆ ಪರೀಕ್ಷೆ ನಡೆಯಲಿದೆ. ಸದ್ಯಕ್ಕೆ ಈ ನಿಯಮ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಉಳಿದ ತರಗತಿಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದಿದ್ದಾರೆ.

ಇದೇ ವೇಳೆ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಬಗ್ಗೆ ಮಾತನ್ನಾಡಿದ ಸಚಿವರು, 16 ವರ್ಷದ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಬೇಕು‌ ಎನ್ನುವ ವಿಚಾರದ ಬಗ್ಗೆ ಸಮಾಜದಲ್ಲಿ ಚರ್ಚೆಯಾಗಬೇಕು. ಇದು ಕೇವಲ ಸರ್ಕಾರದ ಜವಬ್ದಾರಿಯಲ್ಲ. ಪೋಷಕರ ಮತ್ತು ಸಮಾಜದ ಜವಬ್ದಾರಿಯೂ ಹೌದು. ವಿದೇಶಗಳಲ್ಲಿ ಈ ಬಗ್ಗೆ ಇರುವ ಕಾನೂನುಗಳನ್ನು ಅಧ್ಯಯನ ಮಾಡಿ ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನು ಮಕ್ಕಳನ್ನ ಶಾಲೆಗೆ ಸೇರಿಸುವ ವಯೋಮಿತಿ ಸಡಿಲಿಕೆಯ ಬಗ್ಗೆಯೂ ಮಾತನ್ನಾಡಿದ್ದಾರೆ. ಮಕ್ಕಳಿಗೆ 5 ವರ್ಷ 10 ತಿಂಗಳು ತುಂಬಿದ್ದರು ದಾಖಲು ಮಾಡಿಕೊಳ್ಳಬಹುದು ಎಂದಿದ್ದಾರೆ.

Join WhatsApp

Join Now

Join Telegram

Join Now