ನವದೆಹಲಿ: ಹಲವು ವರ್ಷಗಳಿಂದ ಜನ ಡಿಜಿಟಲ್ ವ್ಯವಹಾರಕ್ಕೆ ಸಾಕಷ್ಟು ಅಡ್ಜೆಸ್ಟ್ ಆಗಿದ್ದಾರೆ. ಹತ್ತು ರೂಪಾಯಿಯಿಂದ ಹಿಡಿದು ಹತ್ತು ಸಾವಿರದ ವ್ಯವಹಾರವಿದ್ದರು ಅದನ್ನು ಫೋನ್ ಪೇ, ಗೂಗಲ್ ಪೇನಲ್ಲೇ ಮುಗಿಸುತ್ತಾರೆ. ಆದ್ರೆ ಅಂಥವರಿಗೆ ಈಗ ಶಾಕಿಂಗ್ ನ್ಯೂಸ್ ಇದೆ.
ಯುಪಿಐ ಬಳಕೆಯಿಂದಾಗಿ ವ್ಯವಹಾರ ಸಲೀಸಾಗಿತ್ತು. ಆದರೆ ಈಗ ಅಂದರೆ ಏಪ್ರಿಲ್ 1-2023ರಿಂದ ಯುಪಿಐ ವಹಿವಾಟು ದುಬಾರಿಯಾಗಲಿದೆ. 2 ಸಾವಿರಕ್ಕಿಂತ ಹೆಚ್ಚಿನ ವ್ಯವಾಹರ ನಡೆದರೆ ಅದಕ್ಕೆ ಈ ಶುಲ್ಕ ಅನ್ವಯವಾಗಲಿದೆ.
ಎಲ್ಲಾ ಯುಪಿಐ ವಹಿವಾಟು ನಡೆಸುವವರಿಗೆ ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್ ಶುಲ್ಕ ವಿಧಿಸುವುದಕ್ಕೆ ಶಿಫಾರಸ್ಸು ಮಾಡಲಾಗಿತ್ತು ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ತಿಳಿಸಿದೆ. ಎರಡು ಸಾವಿರಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ ಅದಕ್ಕೆ 1.1 ರೂಪಾಯಿ ಶುಲ್ಕ ಅನ್ವಯವಾಗಲಿದೆ.