ಇನ್ಮುಂದೆ ವರ್ಷಕ್ಕೆ 2 ಬಾರಿ ಐಪಿಎಲ್ ಆಟ..!

ಬೆಂಗಳೂರು: 2024ರ ಐಪಿಎಲ್ ಆಟಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಐಪಿಎಲ್ ಫೀವರ್ ಅಂದ್ರೆ ಕೇಳಬೇಕಾ. ಸದಾ ಅದರ ಗುಂಗಲ್ಲೇ ಜನ ಇರುತ್ತಾರೆ‌. ಮಾರ್ಚ್ 22ಕ್ಕೆ ಐಪಿಎಲ್ ಹಬ್ಬ ಶುರುವಾಗಲಿದೆ. ಮೊದಲ ದಿನವೇ ಹೈವೋಲ್ಟೇಜ್ ಪಂದ್ಯಗಳಿಂದ ಈ ಬಾರಿಯ ಐಪಿಎಲ್ ಶುರುವಾಗಲಿದೆ.

ಮೊದಲ ದಿನ ಹೆವೀ ಫ್ಯಾನ್ ಬೇಸ್ ಹೊಂದಿರುವಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸಿ ಎಸ್ ಕೆ ನಡುವೆ ಆಟ ಶುರುವಾಗಲಿದೆ. ಈ ಪಂದ್ಯಗಳನ್ನು ವೀಕ್ಷಣೆ ಮಾಡುವುದಕ್ಕೇನೆ ಕ್ರಿಕೆಟ್ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಮೊದಲ ಮದ್ಯ ಬೆಂಗಳೂರಿನಲ್ಲಿಯೇ ಆರಂಭವಾಗಲಿದೆ. ಇದರ ನಡುವೆ ಮತ್ತೊಂದು ಖುಷಿಯ ಸುದ್ದಿಯೊಂದು ಹೊರ ಬಿದ್ದಿದೆ. ಅದುವೆ ಮುಂದಿನ ವರ್ಷದಿಂದ ವರ್ಷಕ್ಕೆ ಎರಡು ಬಾರಿ ಐಪಿಎಲ್ ನಡೆಯಲಿದೆ ಎಂಬುದು.

 

ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮೆಗಾ ಪ್ಲ್ಯಾನ್ ಮಾಡುತ್ತಿದೆ‌ ಎನ್ನಲಾಗಿದೆ. ಈ ಹಿಂದೆ ಕೂಡ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಈ ವಿಚಾರವಾಗಿ ಪ್ರಸ್ತಾಪ ಮಾಡಿದ್ದರು. ಆದರೆ ಅದು ಸಕ್ಸಸ್ ಆಗಿರಲಿಲ್ಲ. ಅಂತರಾಷ್ಟ್ರೀಯ ಪಂದ್ಯಗಳ ಸ್ಲಾಟ್ ಕಡಿಮೆ ಇರುವ ವರ್ಷಗಳಲ್ಲಿ ಐಪಿಎಲ್ ಆಯೋಜನೆ ಮಾಡುವ ಬಗ್ಗೆ ಬಿಸಿಸಿಐ ಚರ್ಚೆ ನಡೆಸುತ್ತಿದೆಯಂತೆ. ಒಂದು ವೇಳೆ ಅದು ಅಸಾಧ್ಯವಾಗದಿದ್ದರೆ ಬದಲಾಗಿ 80 ಪಂದ್ಯಗಳ ಬದಲಾಗಿ 90 ಪಂದ್ಯಗಳ ಆಯೋಜನೆ ಬಗ್ಗೆಯೂ ಚರ್ಚೆ ನಡೆಯುತ್ತಿದೆಯಂತೆ. ಒಂದು ವೇಳೆ ಎಲ್ಲಾ‌ ಅಂದುಕೊಂಡಂತೆ ನಡೆದು, ವರ್ಷಕ್ಕೆ ಎರಡು ಬಾರಿ ಐಪಿಎಲ್ ನಡೆಸುವಂತೆ ಆಗಿ ಬಿಟ್ಟರೆ ಆಹಾ ಕ್ರಿಕೆಟ್ ಪ್ರಿಯರಿಗೆ ವರ್ಷವಿಡಿ ಮನರಂಜನೆ. ಹಾಗೇ ಆರ್ಸಿಬಿ ಫ್ಯಾನ್ಸ್ ವರ್ಷವಿಡಿ ನಮ್ದೆ ಕಪ್‌ ಅಂತ ಓಡಾಡಿಕೊಂಡು ಇರುತ್ತಾರೆ‌.

Share This Article
Leave a Comment

Leave a Reply

Your email address will not be published. Required fields are marked *