Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೀಲಂ ಸಂಜೀವ ರೆಡ್ಡಿಯಿಂದ ದ್ರೌಪದಿ ಮುರ್ಮುವರೆಗೆ, ಜುಲೈ 25 ರಂದೇ ಪ್ರಮಾಣ ವಚನ ಏಕೆ ?

Facebook
Twitter
Telegram
WhatsApp

 

ನವದೆಹಲಿ, (ಜು.22) : ಇಂದು ಇತಿಹಾಸ ನಿರ್ಮಿಸಿದ ಮೊದಲ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಭಾರತದ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದೆ ರಾಮ್ ನಾಥ್ ಕೋವಿಂದ್, ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್, ಎಪಿಜೆ ಅಬ್ದುಲ್ ಕಲಾಂ – ಇವರೆಲ್ಲರೂ ಜುಲೈ 25 ರಂದೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ದಿನವೇ ರಾಷ್ಟ್ರಪತಿಗಳ ಪ್ರಮಾಣ ವಚನ ಏಕೆ ? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

1977 ರಿಂದ ಆಯ್ಕೆಯಾದವರೆಲ್ಲರೂ ಜುಲೈ 25 ರಂದೇ ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು ಎಂಬುದನ್ನು ಗಮನಿಸಬೇಕು. ಅಂದು ಭಾರತದ ಆರನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. ಅಂದಿನಿಂದ ಇಂದಿನವರೆಗೂ ಎಲ್ಲಾ ರಾಷ್ಟ್ರಪತಿಗಳೂ ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಏಕೆಂದರೆ 1977 ರಿಂದ ಅಧಿಕಾರ ಸ್ವೀಕರಿಸಿದ ಎಲ್ಲಾ ರಾಷ್ಟ್ರಪತಿಗಳೂ ತಮ್ಮ ಪೂರ್ಣ ಅವಧಿಯನ್ನು ಪೂರೈಸಿದ್ದಾರೆ. ಅದರಂತೆ ಜುಲೈ 24 ಕ್ಕೆ ಎಲ್ಲರ ಅವಧಿ ಮುಗಿದಿದ್ದು, ಈ ಕಾರಣದಿಂದಾಗಿ ಕಳೆದ ನಾಲ್ಕೂವರೆ ದಶಕಗಳಿಂದ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸುತ್ತಾ ಬಂದಿದ್ದಾರೆ.

ಡಾ. ಬಾಬು ರಾಜೇಂದ್ರ ಪ್ರಸಾದ್ ದೇಶದ ಮೊದಲ ರಾಷ್ಟ್ರಪತಿಯಾಗಿ 26 ಜನವರಿ 1950 ರಂದು ಪ್ರಮಾಣವಚನ ಸ್ವೀಕರಿಸಿದರು. ಅವರು ಮೇ 13, 1962 ರವರೆಗೆ ಅಧಿಕಾರದಲ್ಲಿದ್ದರು. ಸರ್ವಪಲ್ಲಿ ರಾಧಾಕೃಷ್ಣನ್ ನಂತರ ರಾಷ್ಟ್ರಪತಿಯಾದರು. ಅವರು ತಮ್ಮ ಪೂರ್ಣಾವಧಿಯವರೆಗೆ ಅಧಿಕಾರದಲ್ಲಿದ್ದರು. 1977 ರವರೆಗೆ ಅಧಿಕಾರ ವಹಿಸಿಕೊಂಡವರು ಯಾರೊಬ್ಬರೂ  ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ 1977 ರ ನಂತರ ಅಧಿಕಾರ ವಹಿಸಿಕೊಂಡ  ಎಲ್ಲಾ ರಾಷ್ಟ್ರಪತಿಗಳು ತಮ್ಮ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಮತ್ತು ಎಲ್ಲರೂ ತಮ್ಮ ಅವಧಿಯನ್ನು ಜುಲೈ 24 ರಂದು ಪೂರ್ಣಗೊಳಿಸಿದರು. ಈ ಹಿನ್ನೆಲೆಯಲ್ಲಿ, ನೂತನವಾಗಿ ಆಯ್ಕೆಯಾದವರು ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಿದರು. ಮತ್ತು ಈ ಸಂಪ್ರದಾಯವು ಕಳೆದ ನಾಲ್ಕು ದಶಕಗಳಿಂದ ನಡೆದುಕೊಂಡು ಬಂದಿದೆ.

1950 ರಿಂದ 2022 ರವರೆಗಿನ ಭಾರತದ ರಾಷ್ಟ್ರಪತಿಗಳ ವಿವರವನ್ನು ಈ ಕೆಳಕಂಡಂತೆ ಕಾಣಬಹುದಾಗಿದೆ.

ಬಾಬು ರಾಜೇಂದ್ರ ಪ್ರಸಾದ್
ಜನನ : ಡಿಸೆಂಬರ್ 3 , 1884
ಮರಣ : ಫೆಬ್ರವರಿ 28,1963
ಅಧಿಕಾರ ಅವಧಿ : ಜನವರಿ 26,1950 ರಿಂದ ಮೇ 13,1962

ಸರ್ವಪಲ್ಲಿ ರಾಧಾಕೃಷ್ಣನ್
ಜನನ : ಸೆಪ್ಟೆಂಬರ್ 5,1888
ಮರಣ : ಎಪ್ರಿಲ್ 17, 1975
ಅಧಿಕಾರ ಅವಧಿ : ಮೇ 13, 1962 ರಿಂದ ಮೇ 13, 1967

ಝಾಕೀರ್ ಹುಸೇನ್
ಜನನ : ಫೆಬ್ರವರಿ 8, 1897
ಮರಣ : ಮೇ 3, 1969
ಅಧಿಕಾರ ಅವಧಿ : ಮೇ 13,1967 ಇಂದ ಮೇ 3, 1969

ವಿ.ವಿ.ಗಿರಿ ( ಹಂಗಾಮಿ ರಾಷ್ಟ್ರಪತಿ )
ಜನನ : ಆಗಸ್ಟ್ 10,1894
ಮರಣ : ಜೂನ್ 23, 1980
ಅಧಿಕಾರ ಅವಧಿ : ಮೇ 3, 1969 ರಿಂದ 1909 ಜುಲೈ 20, 1969

ಮಹಮ್ಮದ್ ಹಿದಾಯತುಲ್ಲಾ
ಜನನ: ಡಿಸೆಂಬರ್ 17, 1905
ಮರಣ: ಸೆಪ್ಟೆಂಬರ್ 18, 1992
ಅಧಿಕಾರ ಅವಧಿ: ಜುಲೈ 20, 1969 ರಿಂದ ಆಗಸ್ಟ್ 24, 1969

ವಿ.ವಿ.ಗಿರಿ
ಜನನ: ಆಗಸ್ಟ್ 10, 1894
ಮರಣ: ಜೂನ್ 23, 1980
ಅಧಿಕಾರ ಅವಧಿ: ಆಗಸ್ಟ್ 24, 1969 ರಿಂದ ಆಗಸ್ಟ್ 24, 1974

ಫಕ್ರುದ್ದೀನ್ ಅಲಿ ಅಹಮದ್
ಜನನ: ಮೇ 13, 1905
ಮರಣ: ಫೆಬ್ರವರಿ 11, 1977
ಅಧಿಕಾರ ಅವಧಿ: ಆಗಸ್ಟ್ 24, 1974 ರಿಂದ ಫೆಬ್ರವರಿ 11, 1977

ಬಿ.ಡಿ.ಜತ್ತಿ ( ಹಂಗಾಮಿ )
ಜನನ: ಸೆಪ್ಟೆಂಬರ್ 10, 1912
ಮರಣ: ಜೂನ್ 07, 2002
ಅಧಿಕಾರ ಅವಧಿ: ಫೆಬ್ರವರಿ 11 , 1977 ರಿಂದ ಜುಲೈ 25, 1977

ನೀಲಂ ಸಂಜೀವ ರೆಡ್ಡಿ
ಜನನ: ಮೇ 19, 1913
ಮರಣ: ಜೂನ್ 01, 1996
ಅಧಿಕಾರ ಅವಧಿ: ಜುಲೈ 25,1977 ರಿಂದ ಜುಲೈ 25, 1982

ಗ್ಯಾನಿ ಜೈಲ್ ಸಿಂಗ್
ಜನನ: ಮೇ 05, 1916
ಮರಣ: ಡಿಸೆಂಬರ್ 25, 1994
ಅಧಿಕಾರ ಅವಧಿ: ಜುಲೈ 25, 1982 ರಿಂದ ಜುಲೈ 25, 1987

ರಾಮಸ್ವಾಮಿ ವೆಂಕಟರಾಮನ್
ಜನನ: ಡಿಸೆಂಬರ್ 04, 1910
ಮರಣ: ಜನವರಿ 27, 2009
ಅಧಿಕಾರ ಅವಧಿ: ಜುಲೈ 25, 1987 ರಿಂದ ಜುಲೈ 25, 1992

ಶಂಕರ್ ದಯಾಳ್ ಶರ್ಮ
ಜನನ: ಆಗಸ್ಟ್ 19, 1918
ಮರಣ: ಡಿಸೆಂಬರ್ 26, 1999
ಅಧಿಕಾರ ಅವಧಿ: ಜುಲೈ 25, 1992 ರಿಂದ ಜುಲೈ 25, 1997

ಕೆ.ಆರ್.ನಾರಾಯಣನ್
ಜನನ: ಅಕ್ಟೋಬರ್ 27, 1920
ಮರಣ: ನವೆಂಬರ್ 09, 2005
ಅಧಿಕಾರ ಅವಧಿ: ಜುಲೈ 25, 1997 ರಿಂದ ಜುಲೈ 25, 2002

ಎ.ಪಿ.ಜೆ ಅಬ್ದುಲ್‌ ಕಲಾಂ
ಜನನ: ಅಕ್ಟೋಬರ್ 15, 1931
ಮರಣ: ಜುಲೈ 27, 2015
ಅಧಿಕಾರ ಅವಧಿ: ಜುಲೈ 25, 2022 ರಿಂದ ಜುಲೈ 25, 2007

ಪ್ರತಿಭಾ ಪಾಟೀಲ
ಜನನ: ಡಿಸೆಂಬರ್ 13, 1934
ಅಧಿಕಾರ ಅವಧಿ: ಜುಲೈ 25, 2007 ರಿಂದ ಜುಲೈ 25, 2012

ಪ್ರಣಬ್ ಮುಖರ್ಜಿ
ಜನನ: ಡಿಸೆಂಬರ್ 11, 1935
ಮರಣ: ಆಗಸ್ಟ್ 31, 2020
ಅಧಿಕಾರ ಅವಧಿ: ಜುಲೈ 25, 2012 ರಿಂದ ಜುಲೈ 25, 2017

ರಾಮನಾಥ ಕೋವಿಂದ
ಜನನ: ಅಕ್ಟೋಬರ್ 1 , 1945
ಅಧಿಕಾರ ಅವಧಿ: ಜುಲೈ 25, 2017 ರಿಂದ ಜುಲೈ 25, 2022

ದ್ರೌಪದಿ ಮುರ್ಮು
ಜನನ : 20 ಜೂನ್ 1958
ಅಧಿಕಾರ : 25 ಜುಲೈ 2022 ರಂದು ಪ್ರಮಾಣ ವಚನ ಸ್ವೀಕಾರ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!