ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 22 : ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸಾವಯವ ಕೃಷಿಕ ಜ್ಞಾನೇಶ್ವರ ಅವರ ತೋಟ ವೀಕ್ಷಣೆ ಮಾಡಿದರು.
ಯಾವ ಯಾವ ಜಾತಿಯ ಬೆಳೆಗಳು ಈ ಪ್ರದೇಶದಲ್ಲಿ ಬೆಳೆದರೆ ಸೂಕ್ತ ಮತ್ತು ಯಾವ ಯಾವ ತಳಿಯ ಹಣ್ಣುಗಳು ಬೆಳೆದರೆ ಸೂಕ್ತ ಎನ್ನುವ ವಿಷಯಗಳ ಬಗ್ಗೆ ಚರ್ಚೆ ಮಾಡಿದರು.
ವಿವಿಧ ತಳಿಯ ಹಸುಗಳ ಮಹತ್ವವನ್ನು ತಿಳಿದರು. ನುಗ್ಗೆ ನಿಂಬೆಕಾಯಿ, ಬಾಳೆ ಬೆಳೆಗಳು ಮತ್ತು ಜೆನು ಸಾಕಾಣಿಕೆ ಬಗ್ಗೆ ವಿಷಯ ತಿಳಿಸಲಾಯಿತು.
ಮುಖ್ಯಶಿಕ್ಷಕ ಹನುಮಂತರೆಡ್ಡಿ, ತಮ್ಮಯ್ಯ, ಪ್ರದೀಪ್ , ಪಜಲ್ ಯುನ್ನಿಸ್ಸಾ, ಗುರುಲಿಂಗಮ್ಮ , ತ್ರಿವೇಣಿ, ಗೀತಾ 190ಕ್ಕೂ ಹೆಚ್ಚು ಶಾಲಾ ಮಕ್ಕಳು ಜೊತೆಗಿದ್ದರು.