70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ: ಇದು ಯಾವ ಯೋಜನೆ ಗೊತ್ತೆ ? 

1 Min Read

ಹಿರಿಯ ನಾಗರಿಕರಿಗಾಗಿಯೇ ಇರುವ ಯೋಜನೆ ಇದಾಗಿದೆ. ಹಿರಿಯ ನಾಗರಿಕರಿಗೆ ಉಚಿತ ಆಸ್ಪತ್ರೆ ಚಿಕಿತ್ಸೆ ಒದಗಿಸುವ ಆರೋಗ್ಯ ಯೋಜನೆ.

ದೊಡ್ಡ ಚಿಕಿತ್ಸೆಗಾಗಿ ಹೆಚ್ಚಿನ ಹಣ ಬೇಕಾಗಬಹುದು. ಇಂತಹ ಸಂದರ್ಭಗಳಲ್ಲಿ ಈ ಕಾರ್ಡ್ ಕುಟುಂಬಕ್ಕೆ ಆರ್ಥಿಕ ರಕ್ಷಣೆ ಒದಗಿಸುತ್ತದೆ. ಹಿರಿಯ ನಾಗರಿಕರು ಚಿಕಿತ್ಸೆ ಪಡೆಯುವಾಗ ಹಣದ ಚಿಂತೆಯಿಲ್ಲದೆ ಆರೈಕೆ ಪಡೆಯಲು ಇದು ಸಹಕಾರಿಯಾಗಿದೆ.

ಈ ಯೋಜನೆಯಡಿ 70 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ವೈದ್ಯಕೀಯ ಭದ್ರತೆ ನೀಡಲಾಗುತ್ತೆ. ಈ ಯೋಜನೆಯ ಇನ್ನೊಂದು ವಿಶೇಷತೆ ಏನಂದ್ರೆ, ಆದಾಯದ ಮಟ್ಟವನ್ನು ಪರಿಗಣಿಸದೆ ಎಲ್ಲ ಅರ್ಹ ಹಿರಿಯರು ಇದರ ಪ್ರಯೋಜನ ಪಡೆಯಬಹುದು. ಸಮಾಜದಲ್ಲಿ ಹಿರಿಯರ ಗೌರವವನ್ನು ಕಾಪಾಡಲು ಹಾಗೂ ಅವರಿಗೆ ಸುರಕ್ಷಿತ ಜೀವನ ಒದಗಿಸಲು ಈ ರೀತಿಯ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತವೆ.

ಈ ಯೋಜನೆಯಲ್ಲಿ ಶಸ್ತ್ರಚಿಕಿತ್ಸೆ, ವಿವಿಧ ವೈದ್ಯಕೀಯ ಪರೀಕ್ಷೆಗಳು, ಔಷಧಿಗಳು, ಆಸ್ಪತ್ರೆಗೆ ದಾಖಲಾಗುವ ಮುನ್ನ ಮತ್ತು ನಂತರದ ಚಿಕಿತ್ಸೆ ವೆಚ್ಚಗಳು ಒಳಗೊಂಡಿರುತ್ತವೆ. ಪಟ್ಟಿ ಮಾಡಲಾದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಲಭ್ಯವಾಗುತ್ತದೆ.ರಾಜ್ಯ ಸರ್ಕಾರದ ನಿಯಮಾನುಸಾರ ನೋಂದಣಿ ಕೇಂದ್ರಗಳಲ್ಲಿ ಅಥವಾ ಆನ್ಲೈನ್ ಮೂಲಕ ಕಾರ್ಡ್ ಪಡೆಯಬಹುದು.

Share This Article
Enable Notifications OK No thanks