ಬೆಂಗಳೂರು: ಮಕ್ಕಳಿಗೆ ಇದು ಪರೀಕ್ಷೆಯ ಸಮಯ. ಈಗಾಗಲೇ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಮಾರ್ಚ್ 31ರಿಂದ ಏಪ್ರಿಲ್15ರ ತನಕ ಪರೀಕ್ಷೆ ನಡೆಯಲಿದೆ. ಹೀಗಾಗಿ ಕೆಎಸ್ಆರ್ಟಿಸಿ ಕಡೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ.

KSRTC ಕಡೆಯಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದೊಂದು ಉಡುಗೊರೆಯಾಗಿ ನೀಡ್ತಾ ಇದೆ. ಸರಿಯಾದ ಸಮಯಕ್ಕೆ ಸಾಕಷ್ಟು ಮಕ್ಕಳಿಗೆ ಬಸ್ ಸಿಗಲ್ಲ, ಕೆಲವೊಂದು ಬಸ್ ಗಳು ರಶ್ ಆಗಿರುತ್ತವೆ. ಹೀಗಾಗಿ ಮಕ್ಕಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೊಠಡಿಗೆ ತಲುಪಲಿ ಎಂಬ ಕಾರಣಕ್ಕೆ ಕೆಎಸ್ಆರ್ಟಿಸಿ ಉಚಿತ ವ್ಯವಸ್ಥೆ ಮಾಡಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದಾಗ ಮಾತ್ರ ಉಚಿತ ಸೇವೆ ಇರಲಿದೆ. ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ, ಬಸ್ ನಲ್ಲಿ ಸಂಚರಿಸಬಹುದು. ಪರೀಕ್ಷಾ ಕೇಂದ್ರಗಳ ಮುಂದೆ ಹತ್ತಲು, ಇಳಿಯಲು ಅನುಮತಿ ಮೇರೆಗೆ ಅವಕಾಶ ನೀಡಲಾಗಿದೆ.





GIPHY App Key not set. Please check settings