ಚಿತ್ರದುರ್ಗ. ಎಪ್ರಿಲ್.02 : ಖೇಲೋ ಇಂಡಿಯಾ ಯೋಜನೆಯಡಿ ಚಿತ್ರದುರ್ಗ ನಗರದ ಬಾಲಕ ಮತ್ತು ಬಾಲಕಿಯರಿಗೆ ಉಚಿತ ಷಟಲ್ ಬ್ಯಾಡ್ಮಿಂಟನ್ ತರಬೇತಿ ನೀಡಲಾಗುವುದು. ಆಸಕ್ತಿಯುಳ್ಳ 6 ರಿಂದ 14 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರು ಪಾಸ್ ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರಗಳೊಂದಿಗೆ ವೀರವನಿತೆ ಓಬವ್ವ ಒಳಾಂಗಣ ಕ್ರೀಡಾಗಂಣದಲ್ಲಿ, ತರಬೇತುದಾರ ಜಿ.ಕೆ.ಗುರುಮೂರ್ತಿ ಅವರ ಬಳಿ ಹೆಸರು ನೊಂದಾಯಿಸಬಹುದು. ನೊಂದಣಿಗೆ ಏಪ್ರಿಲ್ 10 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9481038141 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


