ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್
ಚಿತ್ರದುರ್ಗ,(ಜೂ.06) : ತಾಲ್ಲೂಕಿನಲ್ಲಿ ಮೂರು ಎಕರೆ ಜಮೀನು ಹೊಂದಿರುವ ಸಣ್ಣ ರೈತರಿಗೆ ಉಚಿತವಾಗಿ ಉಳುಮೆಯನ್ನು ಮಾಡಿಕೊಡಲಾಗುವುದೆಂದು ರಘುಆಚಾರ್ ಅಭಿಮಾನಿಗಳ ಸಂಘ ತಿಳಿಸಿದೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷ ಶಿವರಾಜ್ ವಿಧಾನ ಪರಿಷತ್ ಮಾಜಿ ಸದಸ್ಯರಾದ ರಘು ಆಚಾರ್ ರವರ ಬಳಿ ಇದರ ಬಗ್ಗೆ ಮಾತನಾಡಿ ಚಿತ್ರದುರ್ಗ ತಾಲ್ಲೂಕಿನ ರೈತರಿಗೆ ಅನುಕೂಲವಾಗುವುದಾರೆ ಮಾಡಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ರೈತರ ನೋಂದಾಣಿ ಕಾರ್ಯ ಪ್ರಾರಂಭವಾಗಿದ್ದು ಈಗಾಗಲೇ 150 ರೈತರು ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ ಎಂದರು.
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ : 9164457311
ಈ ಕಾರ್ಯಕ್ಕಾಗಿ 20 ಟ್ರಾಕ್ಟರ್ ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಉಳುಮೆಯ ಪೂರ್ಣ ಪ್ರಮಾಣದ ಖರ್ಚು ನಮ್ಮದೇ ಆಗಿದೆ. ರೈತರಿಗೆ ಹೂರೆಯಾಗುವುದಿಲ್ಲ, ಎಷ್ಟೇ ಜನ ರೈತರು ಬಂದರು ಸಹಾ ಉಳುಮೆಯನ್ನು ಮಾಡಿಸಿಕೊಡಲಾಗುವುದು. ಆದರೆ ಭೂಮಿ ಮೂರು ಎಕರೆ ಒಳಗಡೆ ಇರಬೇಕಿದೆ ಎಂದ ಅವರು ಇದೇ ಗುರುವಾರ ಈ ಕಾರ್ಯಕ್ರಮಕ್ಕೆ ಎಂ.ಕೆ.ಹಟ್ಟಿಯಲ್ಲಿ ಬೆಳಿಗ್ಗೆ 10.30ಕ್ಕೆ ರಘುಆಚಾರ್ ಚಾಲನೆ ನೀಡಲಿದ್ದಾರೆ.
ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಸಾನಿಧ್ಯವಹಿಸಲಿದ್ದಾರೆ. ಇದು ಯಾವುದೇ ಚುನಾವಣೆ ನಿಮ್ಮಿತ್ತ ಅಲ್ಲ ಸಮಾಜ ಸೇವೆಗಾಗಿ ಮಾಡಲಾಗುತ್ತಿದೆ ಎಂದರು.
ಗೋಷ್ಟಿಯಲ್ಲಿ ರೈತ ಸಂಘದ ಅಧ್ಯಕ್ಷ ಕಲ್ಲೇಶ್, ಕಾರ್ಯದರ್ಶಿ ಮಾರುತಿ, ಸದಾಶಿವ ಪ್ರಸನ್ನ ಭಾಗವಹಿಸಿದ್ದರು.