ಚಿತ್ರದುರ್ಗ. ಜುಲೈ. 23 : ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ನಾಳೆ (ಜುಲೈ 24 ರಂದು) ವಿಶ್ವ ಮೆದುಳು ದಿನದ ಪ್ರಯುಕ್ತ ಉಚಿತ ನರರೋಗ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರಕ್ಕೆ ನರರೋಗ ತಜ್ಞರಾದ ಡಾ.ಕಿರಣ್ ಗೌಡ ಆಗಮಿಸಲಿದ್ದು, ತಲೆನೋವು, ಅಪಸ್ಮಾರ, ಪಾಶ್ರ್ವವಾಯು, ಮರೆವಿನ ಖಾಯಿಲೆ ಹಾಗೂ ನರರೋಗ ಸಂಬಂಧಿಸಿದ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.ಮತ್ತು ಉಚಿತ ಸ್ಪೀಚ್ ಥೆರಪಿ, ಫಿಜಿಯೋಥೆರಪಿಥೆರಪಿ, ಕೌನ್ಸಿಲಿಂಗ್ಸಿ ಸಿಗಲಿದೆ ರೋಗಿಗಳು ಹಾಗೂ ಸಾರ್ವಜನಿಕರು ಉಚಿತ ನರರೋಗ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆಯಬಹುದು ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಹಾಗೂ ಸಿಎಂಸಿಆರ್‍ಐ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.









