ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್
ಚಿತ್ರದುರ್ಗ(ಜು.07) : ರೋಟರಿ ಕ್ಲಬ್ ಮತ್ತು ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ತಾಲ್ಲೂಕಿನ ಯಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ರಕ್ತದೂತ್ತಡ, ಸಕ್ಕರೆ ಖಾಯಿಲೆ, ಕಿವಿ ಮೂಗು ಗಂಟಲು, ಕಣ್ಣು ಸಂಬಂಧಿಸಿದ ತೊಂದರೆ, ತೆಲೆನೋವು, ಚರ್ಮದ ಸಮಸ್ಯೆಗಳು, ಅಲರ್ಜಿ, ತುರಿಕೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ತಪಾಸಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ತಪಾಸಣೆ ಮಾತ್ರವಲ್ಲದೆ ಉಚಿತವಾಗಿ ಔಷಧಿಯನ್ನು ಸಹಾ ವಿತರಣೆ ಮಾಡಲಾಯಿತು.
ಈ ಶಿಬಿರದಲ್ಲಿ ಯಖಗೋಡು ಗ್ರಾಮದ
ಸುತ್ತಮುತ್ತಲಿನ ಗ್ರಾಮ ಗ್ರಾಮಸ್ಥರು ಆಗಮಿಸಿ ಶಿಬಿರದ ಲಾಭವನ್ನು ಪಡೆದಿದ್ದಾರೆ. ಇದರಲ್ಲಿ 90 ಜನ ತಪಾಸಣೆಗೆ ಒಳಗಾಗಿದ್ದು ಇದರಲ್ಲಿ ಹೊಸದಾಗಿ 25 ಜನ, ಆಥ್ರೋ 05, ಸಕ್ಕರೆ ಖಾಯಿಲೆಯವರು 05, ಇಎನ್‍ಟಿ 05 ಹಾಗೂ ಆಥ್ರೋಪಡಿಕ್ಸ್ 10 ಚಿಕಿತ್ಸೆಯನ್ನು ಪಡೆದಿದ್ದಾರೆ.
ರೋಟರಿ ಕ್ಲಬ್‍ನ ಅಧ್ಯಕ್ಷರಾದ ಮಾಧುರಿ ಮಧುಪ್ರಸಾದ್, ಕಾರ್ಯದರ್ಶಿ ಜಯಶ್ರೀ ಷಾ, ಕಾರ್ಯಕ್ರಮದ ಸಂಯೋಜಕರಾದ ಎಸ್.ವಿರೇಶ್, ರೋಟೇರಿಯನ್ ಗಳಾದ ಮೈಲೇಶ್, ಕುರುಬರಹಳ್ಳಿ ಶಿವಣ್ಣ, ಮಧುಪ್ರಸಾದ್, ವೀರಭದ್ರಸ್ವಾಮಿ, ಬ್ರಹ್ಮಾನಂದ ಗುಪ್ತ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನವೀದ್ ಬೇಗ್, ಡಾ. ಸೀತಾ, ಡಾ. ತೇಜಸ್ವಿ, ಡಾ.ರೈಜಾ, ಡಾ.ಚಿರು ಮಾಧವ್ ಭಾಗವಹಿಸಿದ್ದರು.