ಚಿತ್ರದುರ್ಗ, ಜೂನ್. 20 : ನಗರದ ರೋಟರಿ ಎಸ್.ಆರ್.ಬಿ.ಎಂ.ಎಸ್ ಬಾಲಭವನದಲ್ಲಿ (ಡಿ.ಸಿ. ಆಫೀಸ್ ಸರ್ಕಲ್ ಬಳಿ) ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಬಸವೇಶ್ವರ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಅರೋಗ್ಯ ತಪಾಸಣಾ ಮತ್ತು ವೈದ್ಯಕೀಯ ಸಮಾಲೋಚನಾ ಶಿಬಿರ ಆಯೋಜಿತವಾಗಿದೆ.
ಶಿಬಿರವು ಜೂನ್. 22ರ ಬೆಳಗ್ಗೆ 9:30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1 ಗಂಟೆಯ ವರೆಗೂ ನಡೆಯಲಿದೆ. ಅರೋಗ್ಯ ಶಿಬಿರದಲ್ಲಿ ಜನರಲ್ ಚೆಕ್ಅಪ್, ಬಿ.ಪಿ, ಶುಗರ್ ಟೆಸ್ಟ್, ಜನರಲ್ ಸರ್ಜರಿ ತಜ್ಞರಿಂದ ತಪಾಸಣೆ, ಈ.ಎನ್.ಟೀ (ಕಿವಿ, ಮೂಗು, ಗಂಟಲು), ಮೂಳೆ ತಜ್ಞರಿಂದ ತಪಾಸಣೆ, ಜನರಲ್ ಸರ್ಜರಿ ಶಾಖೆಗಳ ತಜ್ಞರಿಂದ ಮತ್ತು ನೇತ್ರ ತಜ್ಞರಿಂದ ಉಚಿತ ತಪಾಸಣೆ ನಡೆಸಿ ಸೂಕ್ತ ವೈದ್ಯಕೀಯ ಸಮಾಲೋಚನೆ – ಸಲಹೆ ನೀಡಲಿದ್ದಾರೆ.
ಬಸವೇಶ್ವರ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಸಹಯೋಗ ಸಂಸ್ಥೆ ಇಂಡಿಯಾನಾ ಹಾರ್ಟ್ ಸಂಸ್ಥೆಯ ವತಿಯಿಂದ ಉಚಿತ ಹೃದಯ ಅರೋಗ್ಯ ಪರೀಕ್ಷೆ, ಈ.ಸಿ.ಜಿ ಮತ್ತು ಅಗತ್ಯವಿರುವ ರೋಗಿಗಳಿಗೆ ಉಚಿತ ಇಕೊ ಟೆಸ್ಟ್ ಸಹಾ ಮಾಡಲಾಗುತ್ತದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರದುರ್ಗದ ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಬಿ.ಟಿ. ಕುಮಾರಸ್ವಾಮಿ ಅವರು ನೆರವೇರಿಸುವರು.
ಮುಖ್ಯಅತಿಥಿಗಳಾಗಿ ದಾವಣಗೆರೆಯಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಆನಂದ ಋಗ್ವೇದಿ ಅವರು ಭಾಗವಹಿಸುವರು.ಚಿತ್ರದುರ್ಗದ ಡಾ. ಸಾಗರ್ ಕೆ. ಕೋರಾ ಅವರು ಆರೋಗ್ಯಕರ ಜೀವನಕ್ಕಾಗಿ ಅಗತ್ಯ ಜೀವನಶೈಲಿ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡುವರು.
ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ರೋಟರಿ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರು ಮಂಜುನಾಥ್ ಭಾಗವತ್, ಕಾರ್ಯದರ್ಶಿಗಳು ಶಿವರಾಮ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚಿತ್ರದುರ್ಗ ಜಿಲ್ಲಾ ಪ್ರತಿನಿಧಿಗಳು ಟಿ.ಕೆ. ನಾಗರಾಜ ರಾವ್, ಅರೋಗ್ಯ ಶಿಬಿರದ ಸಂಚಾಲಕರಾದ ಶಶಿಧರ್ ರಾವ್ ಮತ್ತು ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳ ಆಡಳಿತ ಮತ್ತು ನಿರ್ವಹಣಾ ವಿಭಾಗದವರು, ತಜ್ಞ ವೈದ್ಯರು, ಪದಾಧಿಕಾರಿಗಳು, ಸಿಬ್ಬಂದಿಗಳು, ಕಾರ್ಯಕರ್ತರು, ಸಮಿತಿ – ಉಪಸಮಿತಿಗಳ ಸದಸ್ಯರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.






