in ,

ಚಿತ್ರದುರ್ಗದಲ್ಲಿ ಮೇ 26 ರಂದು ಉಚಿತ ಆರೋಗ್ಯ ಶಿಬಿರ : ಯಾವೆಲ್ಲಾ ಕಾಯಿಲೆಗಳಿಗೆ ಉಚಿತ ತಪಾಸಣೆ ? ಇಲ್ಲಿದೆ ಮಾಹಿತಿ…

suddione whatsapp group join

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮೇ. 24) :  ಚಿತ್ರದುರ್ಗ ರೋಟರಿ ಕ್ಲಬ್ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಮೇ. 26ರ ಶುಕ್ರವಾರದಂದು ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿಬಾಲಭವನದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಸಪ್ತಗಿರಿ ಆಸ್ಪತ್ರೆಯ ಶಿಬಿರದ ಸಂಚಾಲಕರಾದ ರಾಘವೇಂದ್ರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ಶಿಬಿರದಲ್ಲಿ ಹೃದಯರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲು ಕಾಯಿಲೆಗೆ ಸಂಬಂಧಿಸಿದಂತೆ ತಪಾಸಣೆಯನ್ನು ಮಾಡಲಾಗುವುದು.

ಇದರಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದವರಿಗೆ ಉಚಿತವಾಗಿ ಅವರನ್ನು ಕರೆದುಕೊಂಡು ಹೋಗಿ ಸಪ್ತಗಿರಿ ಆಸ್ಪತ್ರೆಯಲ್ಲಿ ಮಾಡಿಸಲಾಗುವುದು. ಇದರ ಜೊತೆಯಲ್ಲಿ ಉಚಿತವಾಗಿ ಇಸಿಜಿ,/2ಡಿ, ಎಕೋ ಸ್ಕ್ಯಾನಿಂಗ್ ಮಾಡಲಾಗುವುದು ಎಂದರು.

ಈ ಶಿಬಿರದಲ್ಲಿ ಭಾಗವಹಿಸಿ ಶಸ್ತ್ರ ಚಿಕಿತ್ಸೆಗೆ ಅರ್ಹರಾದವರು ಬಿಪಿಎಲ್ ಕಾರ್ಡ್ ಸೇರಿದಂತೆ ಇತರೆ ಕಾರ್ಡನ್ನು ಹೊಂದಿದ್ದರೆ ಉಚಿತವಾಗಿ ಚಿಕಿತ್ಸೆಯನ್ನು ನಡೆಸಲಾಗುವುದು ಇಲ್ಲದವರಿಗೂ ಸಹಾ ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗುವುದು. ಅಂದು ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೂ ತಪಾಸಣೆಯನ್ನು ಮಾಡಲಾಗುವುದು. ನಮ್ಮ ಆಸ್ಪತ್ರೆಯಿಂದ 7 ಜನ ತಜ್ಞ ವೈದ್ಯರು ಆಗಮಿಸಲಿದ್ದಾರೆ ಎಂದರು.

ಗೋಷ್ಟಿಯಲ್ಲಿ ಭಾಗವಹಿಸಿದ್ದ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷರಾದ ಕನಕರಾಜು ಮಾತನಾಡಿ ರೋಟರಿ ಕ್ಲಬ್‌ವತಿಯಿಂದ ಈ ರೀತಿಯ ವಿವಿಧ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನತೆಯ ಆರೋಗ್ಯವನ್ನು ಕಾಪಾಡಲಾಗುತ್ತದೆ, ಇದರೊಂದಿಗೆ ಶಾಲಾ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಸಾಮಾಗ್ರಿಗಳನ್ನು ನೀಡುವುದರೊಂದಿಗೆ ಅವರ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ.

ಅಪೌಷ್ಟಿಕತೆಯ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕತೆಯನ್ನು ನೀಡುವ ವಿವಿಧ ರೀತಿಯ ವಸ್ತುಗಳನ್ನು ನೀಡುವುದರೊಂದಿಗೆ ದೇಶಕ್ಕೆ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನಿಡುವ ಕಾರ್ಯವನ್ನು ರೋಟರಿ ಕ್ಲಬ್ ಮಾಡುತ್ತಿದೆ ಎಂದರು.

ಗೋಷ್ಟಿಯಲ್ಲಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ರೋ. ಜಯಶ್ರೀ ಷಾ. ರೋ.ವಿಕ್ರಾಂತ್ ಜೈನ್ ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹೆಚ್. ಅಂಜನೇಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಮೇ. 26 ರಂದು  ಬೃಹತ್ ಅಭಿಮಾನದ ನಡಿಗೆ

BJP ಸರ್ಕಾರದಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ಈಗ ಎಫ್ಐಆರ್ ದಾಖಲು..!