ಚಿತ್ರದುರ್ಗ : ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೈ.ಲಿ., ಹೆಗ್ಗೆರೆ, ಚಳ್ಳಕೆರೆ ಮತ್ತು ದೃಷ್ಠಿ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಅ.22 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಣಿಕೆರೆ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಶಿಬಿರವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆರೆ, ಹೊಟ್ಟೆಜ್ಜನ ಕಪಿಲೆ, ಕಾಪರಹಳ್ಳಿ, ಜಡೆಕುಂಟೆ, ಮರಿಕುಂಟೆ, ಕಂಡೆನಹಳ್ಳಿ ಗೊಲ್ಲರಹಟ್ಟಿ ಮತ್ತು ಇತರೆ ಸುತ್ತಮುತ್ತಲ ಹಳ್ಳಿಗಳಿಂದ ಬಂದ ಜನರಿಗೆ ನೇತ್ರ ತಪಾಸಣೆ ಮಾಡಿ ಅಗತ್ಯ ವಿದ್ದವರಿಗೆ ಕನ್ನಡ ವಿತರಣೆಯನ್ನು ಮಾಡಿದರು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದ ಡಾ. ನಾಗರಾಜ್, ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಣಿಕೆರೆ. ಮಾತನಾಡಿ, ಕಣ್ಣು ಜೀವನಕ್ಕೆ ಬೇಕಾಗುವ ಬಹು ಮುಖ್ಯ ಅಂಗ, ಅದರ ಸುರಕ್ಷತೆ ಮತ್ತು ಸಂರಕ್ಷಣೆ ನಮ್ಮ ಹೊಣೆ, ಇಲ್ಲವಾದರೆ ಜೀವನ ಕಗ್ಗತ್ತಲೆಯ ಗೂಡು ಎಂದು ನುಡಿದರು, ಮುಂದುವರಿದು, ಇತ್ತೀಚಿನ ಮಕ್ಕಳು ಬಾಲ್ಯದಿಂದಲೆ ಹೆಚ್ಚು ಹೆಚ್ಚು ಮೋಬೈಲ್ ಬಳಕೆ ಮಾಡುವ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಿನ ತೊಂದರೆ ಅನುಭವಿಸುತ್ತಿದ್ದಾರೆ ಹಾಗಾಗಿ ಪೋಷಕರು ಚಿಕ್ಕ ಮಕ್ಕಳಿಗೆ ಬಾಲ್ಯದಲ್ಲಿಯೇ ಮೋಬೈಲ್ ಹಾಗೂ ಟಿ.ವಿ. ಬಳಕೆಗಳನ್ನು ಕಡಿಮೆ ಮಾಡಿಸಬೇಕು ಮತ್ತು ಟಿ.ವಿ ನೋಡುವಾಗ ಕನಿಷ್ಟ ಎರಡು ಮೀಟರ್ ದೂರದಿಂದ ನೋಡಬೇಕು ಎಂದರು ಮತ್ತು ಪ್ರಾಕಾಶ್ ಸ್ಪಾಂಜ್ ಸ್ಟೀಲ್ ಫ್ಯಾಕ್ಟರಿ ರವರು ಕಂಪನಿಯ ಸುತ್ತಮುತ್ತಲೂ ಇರುವಂತಹ ಎಲ್ಲಾ ಗ್ರಾಮಗಳಿಗೂ ಹೆಚ್ಚಿನ ಆದ್ಯತೆಕೊಟ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದರು.
ಮುಂದುವರೆದು ಸಾಣಿಕೆರೆ ಗ್ರಾಮ ಪಂಚಾಯಿತಿ ಆಧ್ಯಕ್ಷರಾದ ಶ್ರೀಮತಿ ಶೃತಿ ಕಾಂತರಾಜು, ಮಾತನಾಡಿ ಪ್ರಾಕಾಶ್ ಸ್ಪಾಂಜ್ ಸ್ಟೀಲ್ ಫ್ಯಾಕ್ಟರಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿರುವುದು ನಮ್ಮಗಳ ಸೌಭಾಗ್ಯ, ಅವರು ನಮ್ಮ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ, ಮಕ್ಕಳ ಶಿಕ್ಷಣ ವ್ಯವಸ್ಥೆಗಳಿಗೆ ಹೆಚ್ಚಿನ ಒತ್ತು ಕೊಟ್ಟು ಅಭಿವೃಧ್ಧಿ ಪಡಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಣಿಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರುಗಳು ಹಾಗೂ ಸಿಬ್ಬಂಧಿವರ್ಗ, ಸಾಣಿಕೆರೆ ಪ್ರಾಥಮಿಕ ಆರೋಗ್ಯಕೇಂದ್ರದ ಸಿಬ್ಬಂಧಿ ವರ್ಗದವರು, ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೈ.ಲಿ. ಕಂಪನಿಯ ಮುಖ್ಯಸ್ಥರು ಮತ್ತು ಸಿಬ್ಬಂಧಿಗಳು ಹಾಗೂ ಸಾಣಿಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.