ಕೊಪ್ಪಳ: ಕೆಲ ದಿನಗಳಿಂದ ಮಠಾಧೀಶರದ್ದು ಒಂದೇ ಹಠ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಒಂದಷ್ಟು ಪೋಷಾಕಾಂಶ ಸಿಗಲಿ ಎಂಬ ಕಾರಣಕ್ಕೆ ನೀಡುತ್ತಿರುವ ಮೊಟ್ಟೆಯನ್ನ ನಿಲ್ಲಿಸಿ ಎಂದು. ಯಾಕಂದ್ರೆ ಸರ್ಕಾರಿ ಶಾಲೆಯಲ್ಲಿ ಸಸ್ಯಹಾರಿ ಸಮುದಾಯಕ್ಕೆ ಸೇರಿದ ಮಕ್ಕಳು ಕೂಡ ಇರ್ತಾರೆ ಹೀಗಾಗಿ ಮೊಟ್ಟೆ ವಿತರಣರ ನಿಲ್ಲಿಸಿ ಎಂಬುದು ಅವರ ವಾದ. ಇದೀಗ ಮಠಾಧೀಶರ ವಿರುದ್ಧ ವಿದ್ಯಾರ್ಥಿಗಳು ಕೆಂಡಾಮಂಡಲರಾಗಿದ್ದಾರೆ.
ಗಂಗಾವತಿಯ ವಿದ್ಯಾರ್ಥಿನಿಯೊಬ್ಬಳು ಮಠಾಧೀಶರುಗೆ ಸವಾಲಾಕಿದ್ದಾಳೆ. ನೀವೂ ಮೊಟ್ಟೆ ತಿನ್ನುವುದನ್ನ ವಿರೋಧಿಸಿದ್ರೆ, ಮೊಟ್ಟೆ ಕೊಡುವುದು ತಪ್ಪಿದ್ರೆ ನಾವೂ ಮಠಕ್ಕೆ ಬಂದು ಮೊಟ್ಟೆ ತಿಂತೀವಿ ಅಂತ ಹೇಳಿದ್ದಾಳೆ. ಸದ್ಯ ವಿದ್ಯಾರ್ಥಿನಿ ನೀಡಿರುವ ಹೇಳಿಕೆ ವೈರಲ್ ಆಗಿದೆ.
ಮೊಟ್ಟೆ ತಿಂದರೆ ನಾವೂ ಬದುಕುತ್ತೀವಿ. ಇಲ್ಲವಾದರೆ ಅಪೌಷ್ಟಿಕತೆಯಿಂದ ಸಾಯುತ್ತೇವೆ. ನಾವೂ ಬದುಕುವುದು ಬೇಕಾ ಅಥವಾ ಮೊಟ್ಟೆ ನಿಲ್ಲಿಸುವುದು ಬೇಕಾ ಎಂದು ಪ್ರಶ್ನಿಸಿದ್ದಾಳೆ. ಒಂದಲ್ಲ ಎರಡೆರಡು ಮೊಟ್ಟೆ ತಿಂತೀವಿ. ಮೊಟ್ಟೆಗಾಗಿ ರೋಡಿಗೆ ಬೇಕಾದ್ರೂ ಇಳಿಯುತ್ತೀವಿ. ನಮಗೆ ಯಾರು ಇಲ್ಲ ಅಂದುಕೊಳ್ಳಬೇಡಿ. ನಮಗೆ ಎಸ್ಎಫ್ಆರ್ ಸಂಸ್ಥೆ ಇದೆ. ಮೊಟ್ಟೆ,ಬಾಳೆ ಹಣ್ಣು ಬೇಕೇ ಬೇಕು ಎಂದಿದ್ದಾಳೆ.
ಮಕ್ಕಳು ದೇವರಿಗೆ ಸಮಾನ ಅಂತಾರೆ. ಆದ್ರೆ ದೇವರ ಆಸೆ ಕೇಳೋದಕ್ಕೆ ರೆಡಿ ಇಲ್ಲ. ಯಾಕೆ ಮಠಗಳಿಗೆ ಬಂದು ದಕ್ಷಿಣೆ ಹಾಕಿಲ್ವಾ. ಒಂದಲ್ಲ ಎರಡು ಮೊಟ್ಟೆ ತಿನ್ನುತ್ತೇವೆ ಅದನ್ನ ಕೇಳೋದಕ್ಕೆ ನೀವ್ಯಾರು ಎಂದು ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.