ಕೋವಿಡ್ ನಿಂದ ಅನಾಥರಾದ ಮಕ್ಕಳಿಗೆ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ

1 Min Read

ಚಿತ್ರದುರ್ಗ : ಪ್ರಸಕ್ತ 2022 – 23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗ (ಪಿ.ಸಿ.ಎಂ. ಬಿ ಮತ್ತು ಪಿ.ಸಿ.ಎಂ.ಸಿ) ಹಾಗೂ ವಾಣಿಜ್ಯ ವಿಭಾಗದಲ್ಲಿ (ಇ.ಬಿ.ಎ.ಎಸ್) ಪ್ರಥಮ ಪಿಯುಸಿ ದಾಖತಿ ಆರಂಭವಾಗಿದ್ದು, ಕಳೆದ 3 ವರ್ಷಗಳಲ್ಲಿ ಕೋರೋನಾದಿಂದ ತಮ್ಮ ಪೂಷಕರನ್ನು ಕಳೆದು ಕೊಂಡ ವಿದ್ಯಾರ್ಥಿಗಳಿಗೆ ಅನುಕಂಪದ ಆಧಾರದ ಮೇಲೆ ಸಂಪೂರ್ಣ ಉಚಿತ ಶಿಕ್ಷಣ ನೀಡುವಂತೆ ಚೈತನ್ಯ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಎಂ.ಎಸ್. ಮಂಜುನಾಥ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರ ಸದುಪಯೋಗವನ್ನು ಸಂಬಂಧಪಟ್ಟ ವಿದ್ಯಾರ್ಥಿಗಳು ಪಡೆಯುವ ಮೂಲಕ ತಮ್ಮ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿ ಕರೆಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.

ಶ್ರೀ ಹರಿ ಎಜುಕೇಶನ್ ಟ್ರಸ್ಟ್
ಚೈತನ್ಯ ಪದವಿ ಪೂರ್ವ ಕಾಲೇಜು ಯಾದವನಂದ ಮಠ  ಹೊಳಲ್ಕೆರೆ ರಸ್ತೆ
9886664294

Share This Article
Leave a Comment

Leave a Reply

Your email address will not be published. Required fields are marked *