ಪ್ರಕೃತಿ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ಮತ್ತು ಉಪನ್ಯಾಸ

1 Min Read

 

ಸುದ್ದಿಒನ್, ಚಿತ್ರದುರ್ಗ, (ಆ.11) : ವಿದ್ಯಾರ್ಥಿಗಳ ಆರೋಗ್ಯ ಬಹಳ ಮುಖ್ಯ. ಮಕ್ಕಳು ಆರೋಗ್ಯವಾಗಿದ್ದರೆ ಶಾಲೆಗೆ ಹಾಜರಾಗುತ್ತಾರೆ ಅವರ ವಿದ್ಯಾಭ್ಯಾಸಕ್ಕೆ ಇದು ಬಹಳ ಮುಖ್ಯ ಎಂದು ಶಾಲೆಯ ಅಧ್ಯಕ್ಷ ಎಂ.ಕೆ. ರವೀಂದ್ರ ಹೇಳಿದರು.

ನಗರದ ಪ್ರಕೃತಿ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಲೆಯ ಕಾರ್ಯದರ್ಶಿ ಎಂ.ಕಾರ್ತಿಕ್  ಮಾತನಾಡುತ್ತಾ ಮಕ್ಕಳು ಏನಾದರೂ ಸಾಧಿಸಬೇಕಾದರೆ ಅವರಿಗೆ ಉತ್ತಮ ಆರೋಗ್ಯ, ಅತ್ಯುನ್ನತ ವಿದ್ಯಾಭ್ಯಾಸ ಹಾಗೂ ಆರೋಗ್ಯಕರ ಕಲಿಕಾ ವಾತಾವರಣ ಬೇಕಾಗುತ್ತದೆ. ಕಲಿಕಾ ವಾತಾವರಣ ಹಾಗೂ ಉತ್ತಮ ವಿದ್ಯಾಭ್ಯಾಸವನ್ನು ಶಾಲೆಗಳು ಒದಗಿಸಬಹುದು ಆದರೆ ವಿದ್ಯಾರ್ಥಿಗಳೇ ಅವರವರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಜಯಚಂದ್ರ ಅವರು prevention is better than cure ಎಂಬ ನುಡಿಯಂತೆ ವಿದ್ಯಾರ್ಥಿಗಳಿಗೆ ಹಲ್ಲು ಹಾಗೂ ಬಾಯಿಯ ಸ್ವಚ್ಛತೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಬೇಬಿ ಸಿಟ್ಟಿಂಗ್ ನಿಂದ ಏಳನೇ ತರಗತಿಯವರಗೆ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ದಂತ ತಪಾಸಣೆಯನ್ನು ನಡೆಸಿ  ಮಾರ್ಗದರ್ಶನ ನೀಡಲಾಯಿತು.

ದಂತ ತಪಾಸಣಾ ಶಿಬಿರದ ನಂತರ ವಿದ್ಯಾರ್ಥಿಗಳೇ ಖುದ್ದಾಗಿ ಎಲ್ಲರೂ ತಮ್ಮ ಜೇಬಿನಲ್ಲಿದ್ದ ಚಾಕಲೇಟ್, ಚ್ಯೂಯಿಂಗ ಗಮ್ ಗಳನ್ನು ಕಸದ ಡಬ್ಬಿಗೆ ಎಸೆದಿದ್ದು ಒಂದು ಅಚ್ಚರಿ ಹಾಗೂ ಸಂತಸದ ವಿಚಾರ. ಈ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಬ್ಯಾನರ್ ಅನ್ನು ಬಳಕೆಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಪರಿವರ್ತನಾ ಟ್ರಸ್ಟ್‌ನ ಎಲ್ಲಾ ಟ್ರಸ್ಟಿಗಳು ಮತ್ತು ಶಾಲೆಯ ಎಲ್ಲ ಶಿಕ್ಷಕರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *