ಚಿತ್ರದುರ್ಗ (ಕರ್ನಾಟಕ ವಾರ್ತೆ) ಅಕ್ಟೋಬರ್ 03: ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಸಾರಿಗೆ ಬಸ್‍ಗಳಲ್ಲಿ ಕಲ್ಪಿಸಲಾಗಿದ್ದ ರಿಯಾಯಿತಿ ಬಸ್‍ಪಾಸ್ ಸೌಲಭ್ಯವನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಕೆ.ಎಸ್.ಆರ್.ಟಿ.ಸಿ ಬಸ್‍ಪಾಸನ್ನು ಇ-ಆಡಳಿತ ಇಲಾಖೆಯ ಮೂಲಕ ತಂತ್ರಾಂಶ ಸಿದ್ಧಪಡಿಸಿಕೊಂಡು ಮತ್ತು ಸ್ಮಾರ್ಟ್‍ಕಾರ್ಡ್ ಮಾದರಿಯಲ್ಲಿ ವಿತರಿಸಲಾಗುತ್ತಿದೆ.
ಬಸ್‍ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕ ಹಾಗೂ ಇತರೆ ಕಾರ್ಮಿಕರಿಗೆ ಮಾತ್ರ ಇಡಿಸಿಎಸ್ ಅವರಿಂದ ವಿತರಿಸಲಾಗುವುದು.
ಪಾಸುಗಳನ್ನು ಕರ್ನಾಟಕ ರಾಜ್ಯ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ವಿತರಿಸಲು ಕ್ರಮವಹಿಸಲಾಗಿದೆ.
ಮಂಡಳಿಯು ನೊಂದಾಯಿತ ಕಾರ್ಮಿಕರು, ಯಾವುದೇ ಜಿಲ್ಲೆಯಲ್ಲಿ ನೊಂದಣಿಯಾಗಿದ್ದರೂ ಸಹ ಅವರು ಇಚ್ಛಿಸುವ ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ (ಕರಾರಸಾ ನಿಗಮ, ವಾಕರಸಾ ಸಂಸ್ಥೆ ಹಾಗೂ ಕರಾರಸಾ ನಿಗಮಗಳ ವ್ಯಾಪ್ತಿಯಲ್ಲಿ) ಅಂದರೆ ಪ್ರಾರಂಭಿಕ ಸ್ಥಳದಿಂದ 07 ಹಂತಗಳವರೆಗೆ (ಗರಿಷ್ಠ 45ಕಿ.ಮೀ) ಉಚಿತವಾಗಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶವಿರುತ್ತದೆ.
ಇಡಿಸಿಎಸ್ ಇಲಾಖೆಯ, ಸೇವಾಸಿಂಧು ಪೋರ್ಟಲ್ ಅವರು ರಾಜ್ಯಾದ್ಯಂತ ಚಿತ್ರದುರ್ಗ ಒನ್, ಕರ್ನಾಟಕ-ಒನ್, ಗ್ರಾಮ-ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿ ಸ್ಟಾರ್ಟ್ ಕಾರ್ಡ್ ಮಾದರಿ ಪಾಸ್ ಪಡೆಯಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.