ಸುದ್ದಿಒನ್, ಚಿತ್ರದುರ್ಗ, ಜನವರಿ. 03 : ನಗರದ ಬಸವೇಶ್ವರ ಟಾಕೀಸ್ ಎದುರುಗಡೆ ಇರುವ ಚಿತ್ರದುರ್ಗ ಡಯಾಬಿಟಿಕ್ ಸೆಂಟರ್ ನಲ್ಲಿ ಡಾ. ಜಿ. ಪ್ರಶಾಂತ್ ಮತ್ತು ಡಾ. ಶೀತಲ್ ಪ್ರಶಾಂತ್ ಅವರ ನೇತೃತ್ವದಲ್ಲಿ ಜನವರಿ 05 ರಂದು ಉಚಿತ ಬಿಪಿ ಮತ್ತು ಶುಗರ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಅಂದು ಬಿ.ಪಿ. ಮತ್ತು ಶುಗರ್ ಗೆ ಸಂಬಂಧಿಸಿದಂತೆ ಉಚಿತವಾಗಿ
ತಜ್ಞರೊಂದಿಗೆ ಸಮಾಲೋಚನೆ ಮತ್ತು ತಪಾಸಣೆ ಮಾಡಲಾಗುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ಸುಸ್ತು, ಆಯಾಸ, ಕೈ ಕಾಲುಗಳಲ್ಲಿ ಜೋಮು, ತೂಕ ಕಡಿಮೆಯಾಗುವುದು, ದೃಷ್ಟಿ ಮಂಜಾಗುವುದು, ಅತಿಯಾದ ಬಾಯಾರಿಕೆ ಮತ್ತು ಹಸಿವು, ಈ ಎಲ್ಲಾ ಲಕ್ಷಣಗಳು ಕಂಡು ಬಂದಲ್ಲಿ ತಪ್ಪದೆ ಬಂದು ತಪಾಸಣೆ ಮಾಡಿಸಿಕೊಳ್ಳಲು ತಿಳಿಸಲಾಗಿದೆ.
ಸಂಪೂರ್ಣ ಮಧುಮೇಹ ಆರೋಗ್ಯ ತಪಾಸಣೆ :
ಬೊಜ್ಜು ಮತ್ತು ಪೋಷಣೆಯ ಸಲಹೆ, ಪೊಡಿಯಾಟ್ರಿ (ಕಾಲಿನ ತಪಾಸಣೆ), ಡಯಾಬಿಟಿಕ್ ಐ ಸ್ತ್ರೀನಿಂಗ್, ಬಯೋಥಿಸಿಯೋಮೆಟ್ರಿ,
ವಾಸ್ಕುಲರ್ ಡೊಪ್ಲರ್,
ಇ.ಸಿ.ಜಿ., 2ಡಿ ಎಕೋ,
ಪಿ.ಎಫ್.ಟಿ. (ಪಲ್ಮನರಿ ಫಂಕ್ಷನ್ ಟೆಸ್ಟ್), ಸಿ.ಜಿ.ಎಂ.ಎಸ್. (ನಿರಂತರ ಗ್ಲಕೋಸ್ ಮಾನಿಟರಿಂಗ್ ಸಿಸ್ಟಮ್),
ಎ.ಬಿ.ಪಿ.ಎಮ್ (ಆಂಬುಲೇಟರಿ ರಕ್ತದೊತ್ತಡ ಮಾನಿಟರಿಂಗ್),
ನ್ಯೂರೋ ಲೈಟ್ ತೆರಫಿ,
ಕಂಪ್ಲೀಟ್ ಡಯಾಬಿಟಿಕ್ ಹೆಲ್ತ್ ಚೆಕಪ್, ಕಂಪ್ಲೀಟ್ ಬಾಡಿ ಕಾಂಪೋಸಿಷನ್ ಅನಾಲಿಸಿಸ್, ಕಂಪ್ಲೀಟ್ ಡಯಾಬಿಟಿಕ್ ಪ್ರೊಫೈಲ್ ಅನಾಲಿಸಿಸ್, ಸುಸಜ್ಜಿತ ಲ್ಯಾಬ್ ಹಾಗೂ ಪಿಯೂಶ್ ಫಾರ್ಮ ಸೌಲಭ್ಯಗಳು ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8722218001
9535178908
ದಿನಾಂಕ : 05/01/2025ನೇ ಭಾನುವಾರ ಸಮಯ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ಥಳ : ಚಿತ್ರದುರ್ಗ ಡಯಾಬಿಟಿಕ್ ಸೆಂಟರ್ ಬಸವೇಶ್ವರ ಟಾಕೀಸ್ ಮುಂಭಾಗ, ಚಿತ್ರದುರ್ಗ.