ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಜು.18) : ನಗರದ ಸ್ನೇಹ ಜೀವಿ ಆಟೋ ಚಾಲಕರ ಸಂಘದಿಂದ ನಗರ ವ್ಯಾಪ್ತಿಯಲ್ಲಿ ಗರ್ಭೀಣಿಯರಿಗೆ ಉಚಿತವಾಗಿ ಆಟೋ ಸೇವೆಯನ್ನು ಪ್ರಾರಂಭ ಮಾಡಿದ್ದಾರೆ.
ಈ ಸೇವೆಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಟೋಗೆ ಗರ್ಭೀಣಿಯರಿಗೆ ಉಚಿತ ಸೇವೆಯ ಸ್ಟಿಕರ್ ಹಚ್ಚುವುದರ ಮೂಲಕ ಜಿಲ್ಲಾಧಿಕಾರಿಗಳಾದ ಶ್ರೀಮತಿ ದಿವ್ಯ ಪ್ರಭು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೊಂದು ಉತ್ತಮವಾದ ಕಾರ್ಯವಾಗಿದೆ. ಆಟೋದವರಿಂದ ಮಾನವೀಯತೆಯ ಕಾರ್ಯ ಇದಾಗಿದೆ, ಗರ್ಭೀಣಿಯರಿಗೆ ಅವರ ಮನೆ ಬಾಗಿಲಿನಿಂದ ಆಸ್ಪತೆಯವರೆಗೂ ಉಚಿತವಾದ ಸೇವೆಯನ್ನು ನೀಡುತ್ತಿರುವುದು ಉತ್ತಮವಾದ ಕಾರ್ಯವಾಗಿದೆ.
ಆಟೋದವರ ಈ ಕಾರ್ಯಕ್ಕೆ ಜಿಲ್ಲೆಯವರ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಆಟೋ ಚಾಲಕರೆ ಸಂಘ ನಮ್ಮ ಆಡಳಿತದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.ಜನತೆ ತಮ್ಮ ಅನುಕೂಲಕ್ಕಾಗಿ ಆಟೋವನ್ನು ಬಳಕೆ ಮಾಡುತ್ತಾರೆ. ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಆಟೋದವರ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿ ಕೊಳ್ಳಿ ಎಂದರು.
ಸ್ನೇಹ ಜೀವಿ ಆಟೋ ಚಾಲಕ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ ನಮ್ಮ ಆಟೋ ಚಾಲಕರ ಸಂಘಟದಿಂದ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ನಗರದ ವ್ಯಾಪ್ತಿಯಲ್ಲಿ ಗರ್ಭಿಣಿಯರಿಗೆ ಉಚಿತವಾಗಿ ಅವರ ಮನೆಯಿಂದ ಆಸ್ಪತ್ರೆಯವರೆಗೂ ಆಟೋ ಸೇವೆಯನ್ನು ದಿನದ 24 ಗಂಟೆಯೂ ಸಹಾ ನೀಡಲಾಗುವುದು. ನಮ್ಮ ಸಂಘದಲ್ಲಿ ಸುಮಾರು 100 ಆಟೋದ ಚಾಲಕರು ಮತ್ತು ಮಾಲೀಕರು ಸದಸ್ಯರಾಗಿದ್ದು, ಅವರೆಲ್ಲರು ಸಹಾ ಈ ಸೇವೆಯನ್ನು ನೀಡಲು ಬದ್ದರಾಗಿದ್ದಾರೆ ಎಂದ ಅವರು ಈ ರೀತಿಯ ಸೇವೆಯನ್ನು ಬೇರೆ ಆಟೋದವರು ಸಹಾ ನೀಡುವಂತಾಗಲಿ ಎಂದು ಆಶಿಸಿದರು.