ಚಿತ್ರದುರ್ಗ, (ಡಿ.15) : ತಾನು ಪೊಲೀಸ್ ಎಂದು ಹೇಳಿಕೊಂಡು ಸಾರ್ವಜನಿಕರನ್ನು ಬೆದರಿಸಿ ಹಣ, ಮೊಬೈಲ್, ಆಭರಣ, ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದ ಆರೋಪಿಯನ್ನು ಚಿತ್ರಹಳ್ಳಿ ಗೇಟ್ ಪೊಲೀಸರು ಬಂಧಿಸಿ ಅಂದಾಜು ರೂ. 2,09,000/- ಮೌಲ್ಯದ ಒಡವೆ, ಮೊಬೈಲ್ ಫೋನ್ ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ.
ಡಿಸೆಂಬರ್ 10 ರಂದು ಈಚಗಟ್ಟ ಮತ್ತು ಚಿತ್ರಹಳ್ಳಿ ಗೇಟ್ ನಡುವೆ ವ್ಯಕ್ತಿಯೋರ್ವನಿಂದ ಮೊಬೈಲ್ ಮತ್ತು ಒಂದು ಸಾವಿರ ರೂಪಾಯಿ ಹಣವನ್ನು ಕಸಿದು ಪರಾರಿಯಾಗಿದ್ದಾನೆ. ಈ ಸಂಬಂಧ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರಿನನ್ವಯ ಹೊಳಲ್ಕೆರೆ ಸಿಪಿಐ ಕೆ.ಎಸ್. ರವೀಶ್ ನೇತೃತ್ವದಲ್ಲಿ ಪಿ.ಎಸ್.ಐ ವಿಶ್ವನಾಥ ಕೆ.ಎನ್, ಪಿ.ಎಸ್.ಐ ಶ್ರೀಮತಿ ಆಶಾ ಹಾಗೂ ಸಿಬ್ಬಂದಿಯವರಾದ ರುದ್ರೇಶ, ಮಧುಸೂದನ, ಕೆ.ಜೆ.ಲೋಕೇಶ, ತಿಮ್ಮಣ್ಣ, ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ವಿರುದ್ಧ ಈಗಾಗಲೇ ಚಿತ್ರಹಳ್ಳಿ,
ಚಿಕ್ಕಜಾಜೂರು, ಶ್ರೀ ರಾಂಪುರ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿವೆ.