ಮೈಸೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಹೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ ನಿವಾಸಿಗಳಾದ 45 ವರ್ಷದ ಚೇತನ್, 43 ವರ್ಷದ ರೂಪಾಲಿ, 65 ವರ್ಷದ ಪ್ರಿಯಂವದ, 15 ವರ್ಷದ ಕುಶಾಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಲ್ವರ ಸಾವಿಗೆ ಆರ್ಥಿಕ ಸಮಸ್ಯೆಯೇ ಕಾರಣ ಎಂದೇ ಹೇಳಲಾಗುತ್ತಿದೆ. ಸಂಕಲ್ಪ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ.

ಡೆತ್ ನೋಟ್ ಸಹ ಸಿಕ್ಕಿದೆ. ನಮ್ಮ ಸಾವಿಗೆ ಬೇರೆ ಯಾರೂ ಕಾರಣರಲ್ಲ, ನಾವೇ ಕಾರಣ. ಆರ್ಥಿಕ ಸಮಸ್ಯೆಯಿಂದಾಗಿ ಸಾವನ್ನಪ್ಪುದ್ದೇವೆ. ಹೀಗಾಗಿ ನಮ್ಮ ಸಂಬಂಧಿಕರಿಗಾಗಲಿ, ಸ್ನೇಹಿತರಿಗಾಗಲಿ ಯಾರೂ ಕೂಡ ತೊಂದರೆಯನ್ನು ಕೊಡಬೇಡಿ ಎಂದು ಡೆತ್ ನೋಟ್ ನಲ್ಲಿ ಮೆನ್ಶನ್ ಮಾಡಿದ್ದಾರೆ.

ಸೌದಿಗೆ ಕಾರ್ಮಿಕರನ್ನು ನೀಡುವ ಏಜೆನ್ಸಿಯನ್ನು ನಡೆಸುತ್ತಿದ್ದರು. 2019ರಲ್ಲಿ ಸಂಕಲ್ಪ ಅಪಾರ್ಟ್ಮೆಂಟ್ ನಲ್ಲಿ ಎರಡು ಫ್ಲಾಟ್ ಅನ್ನು ಖರೀದಿ ಮಾಡಿದ್ದರು. ಆ ಸಮಯದಲ್ಲಿ ಆರ್ಥಿಕವಾಗಿಯೂ ಚೆನ್ನಾಗಿದ್ದ ಕುಟುಂಬ, ಕೊರೊನಾ ನಂತರ ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸಿದೆ ಎನ್ನಲಾಗುತ್ತಿದೆ. ನಿನ್ನೆ ಸಂಜೆಯಷ್ಟೇ ಗೋರೂರಿನ ದೇವಸ್ಥಾನಕ್ಕೆ ಹೋಗಿ ಬಂದಿದ್ದರು. ಚೇತನ್ ಅವರ ರೂಪಾಲಿ ಅವರು ತಮ್ಮ ತಂದೆ ತಾಯಿ ಮನೆಗೆ ಹೋಗಿ ಊಟ ಮಾಡಿಕೊಂಡು ಮನೆಗೆ ಬಂದಿದ್ದಾರೆ. ಮನೆಗೆ ಬಂದ ಮೇಲೆ ಏನಾಗಿದೆ ಎಂಬುದು ಮಾತ್ರ ತಿಳಿಯುತ್ತಿಲ್ಲ. ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ-ಪತ್ನಿ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಚೇತನ್ ಸಹೋದರ ಅಮೆರಿಕಾದಲ್ಲಿದ್ದು, ಅವರಿಗೂ ಕರೆ ಮಾಡಿ, ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ತಕ್ಷಣ ಅವರ ಸಹೋದರ ಕರೆ ಕಟ್ ಮಾಡಿ, ರೂಪಾಲಿ ಪೋಷಕರಿಗೆ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿ ಈ ದೊಡ್ಡ ದುರಂತ ನಡೆದೆ ಹೋಗಿತ್ತು.

