ಹೈದರಾಬಾದ್‌‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

 

ಹೈದರಾಬಾದ್ : ಇಲ್ಲಿನ ತಾರ್ನಾಕದಲ್ಲಿ ಭಾರೀ ದುರಂತವೊಂದು ನಡೆದಿದೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾರ್ನಾಕದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಇಂದು (ಸೋಮವಾರ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತರಲ್ಲಿ ದಂಪತಿ, ನಾಲ್ಕು ವರ್ಷದ ಬಾಲಕಿ ಹಾಗೂ ಮತ್ತೊಬ್ಬ ಮಹಿಳೆಯೂ ಸೇರಿದ್ದಾರೆ.

ಮೃತರನ್ನು ಪ್ರತಾಪ್ (34), ಸಿಂಧೂರ (32), ಆದ್ಯಾ (4) ಮತ್ತು ಪ್ರತಾಪ್‌ನ ತಾಯಿ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷದ ಬಾಲಕಿಯನ್ನು ಮೊದಲು ನೇಣು ಬಿಗಿದು ನಂತರ ಇಡೀ ಕುಟುಂಬದವರು ನೇಣು ಹಾಕಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ಪ್ರತಾಪ್ ಚೆನ್ನೈನ ಕಾರ್ ಶೋ ರೂಂನಲ್ಲಿ ಡಿಸೈನರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಸಿಂದೂರಾ ಹಿಮಾಯತ್ ನಗರದಲ್ಲಿ ಖಾಸಗಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *