ಕೋಲಾರ: ನಿನ್ನೆಯಷ್ಟೇ ಈ ಘಟನೆ ಸಂಬಂಧದ ಸುದ್ದಿ ಓದಿದ್ವಿ. ಮಗು ಅಪಹರಣದ ವಿಚಾರದಲ್ಲಿ ಪೊಲೀಸ್ ತನಿಖೆಗೆ ಹೆದರಿದ್ದ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಈ ಕುಟುಂಬದಲ್ಲಿದ್ದ ಪುಷ್ಪ ಎಂಬ ಮಹಿಳೆ ಮಗುವನ್ನ ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ಆ ವಿಚಾರ ತಿಳಿದ ಪೊಲೀಸರು ಇಡೀ ಕುಟುಂಬವನ್ನ ವಿಚಾರಣೆಗೆ ಒಳಪಡಿಸಿತ್ತು. ಆ ಬಳಿಕ ನಾವೆಲ್ಲಿ ಸಿಕ್ಕಿಬೀಳ್ತಿವೋ ಅನ್ನೋ ಭಯಕ್ಕೆ ಕುಟುಂಬದ ಐದು ಜನ ನಿನ್ನೆ ಸಂಜೆ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದರು.
ಇದೀಗ ಚಿಕಿತ್ಸೆ ಫಲಕಾರಿಯಾಗದೆ 70 ವರ್ಷದ ಮುನಿಯಪ್ಪ, 65 ವರ್ಷದ ನಾರಾಯಣಮ್ಮ, 45 ವರ್ಷದ ಬಾಬು, 17 ವರ್ಷದ ಗಂಗೋತ್ರಿ ಸಾವನ್ನಪ್ಪಿದ್ದಾರೆ. ಮಗು ಮಾರಾಟ ಮಾಡಿದ್ದ ಆರೋಪ ಹೊತ್ತಿದ್ದ 33 ವರ್ಷದ ಪುಷ್ಪ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.