ಬೆಂಗಳೂರು: ದೀಪಾವಳಿ ಹಬ್ಬದ ದಿನ ಕುಮಾರಸ್ವಾಮಿ ಅವರ ಮನೆಗೆ ದೀಪಲಂಕಾರ ಮಾಡಿದ್ದರು. ಅದಕ್ಕೆ ಅಕ್ರಮವಾಗಿ ಕರೆಂಟ್ ಎಳೆದುಕೊಂಡಿದ್ದರು. ಇದನ್ನು ಕಾಂಗ್ರೆಸ್ ಟೀಕೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರ ಬಗ್ಗೆ ಕರೆಂಟ್ ಕಳ್ಳ ಎಂಬ ಪೋಸ್ಟರ್ ಅಂಟಿಸಲಾಗಿತ್ತು. ಇದೀಗ ಆ ಪೋಸ್ಟರ್ ಅಂಟಿಸಿದವರು ಯಾರೆಂಬುದನ್ನು ಕಂಡು ಹಿಡಿದಿದ್ದಾರೆ.
ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಈ ಬಗ್ಗೆ ಮಾತನಾಡಿದ್ದಾರೆ. ಕರೆಂಟ್ ಕಳ್ಳ ಎಂದು ಪೋಸ್ಟರ್ ಅಂಟಿಸಿದ್ದಂತ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಮಾತನಾಡಿ, ಕಾಂಗ್ರೆಸ್ ಮುಖಂಡನ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಪೋಸ್ಟರ್ ಅಂಟಿಸಿದ ಮುಖಂಡನ ಹೆಸರು ಎಸ್ ಮನೋಹರ್ ಅಂತ. ಅವನೊಬ್ಬ ಲೋಫರ್. ಪೋಸ್ಟರ್ ಅಂಟಿಸಿದ ಉದ್ದೇಶ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸುವುದಾಗಿತ್ತು. ಅವರು ಕೆರಳಿ ದಾಂಧಲೆ ಮಾಡುವಂತಾಗಿ, ಶಾಂತಿ, ಸುವ್ಯವಸ್ಥೆಯನ್ನು ಹಾಳು ಮಾಡುವುದು ಅವನ ಗುರಿಯಾಗಿತ್ತು ಎಂದು ರಮೇಶ್ ಗೌಡ ಕಿಡಿಕಾರಿದ್ದಾರೆ. ಅದರ ಜೊತೆಗೆ ಕಾಂಗ್ರೆಸ್ ಮುಖಂಡರ ಫೋಟೋವನ್ನು ತೋರಿಸಿದ್ದಾರೆ.