ನವದೆಹಲಿ, (ಅ.10) : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಇಂದು (ಅಕ್ಟೋಬರ್ 10,ಸೋಮವಾರ) ಬೆಳಿಗ್ಗೆ 8:15 ಕ್ಕೆ ನಿಧನರಾದರು.
ಮುಲಾಯಂ ಸಿಂಗ್ ಯಾದವ್ ಅವರ ಅನಾರೋಗ್ಯದ ಕಾರಣ ಅವರನ್ನು ಅಕ್ಟೋಬರ್ 2 ರಂದು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.
“ನನ್ನ ತಂದೆ ಮತ್ತು ಪ್ರತಿಯೊಬ್ಬರ ನಾಯಕ ಇನ್ನಿಲ್ಲ” ಎಂದು ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ಟ್ವಿಟರ್‌ನಲ್ಲಿ ದುಃಖವನ್ನು ಹಂಚಿಕೊಂಡಿದ್ದಾರೆ.
मेरे आदरणीय पिता जी और सबके नेता जी नहीं रहे – श्री अखिलेश यादव
— Samajwadi Party (@samajwadiparty) October 10, 2022
82 ವರ್ಷ ವಯಸ್ಸಿನ ಸಮಾಜವಾದಿ ಪಕ್ಷದ ಹಿರಿಯ ನಾಯಕ ಉಸಿರಾಟದ ತೊಂದರೆ ಮತ್ತು ಮೂತ್ರದ ಸೋಂಕಿನಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.