ದಾವಣಗೆರೆ: ಇತ್ತಿಚೆಗೆ ಶಾಸಕ ರೇಣುಕಾಚಾರ್ಯ ಅವರ ಬಗೆಗಯ ಸುದ್ದಿಯೊಂದು ಹರಿದಾಡಿತ್ತು. ಶಾಲಾ ಕಾರ್ಯಕ್ರಮದಲ್ಲೂ ರಾಜಕೀಯ ಮಾತನಾಡಿದ್ದಕ್ಕೆ ಅವರನ್ನು ವೇದಿಕೆಯಿಂದಾನೇ ಕೆಳಗಿಳಿಸಿದರು ಎಂದು ಹೇಳಲಾಗಿತ್ತು. ಇದೀಗ ಆ ವಿಚಾರಕ್ಕೆ ಶಾಸಕ ರೇಣುಕಾಚಾರ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ಚುನಾವಣೆ ಬಂದಿದೆ ಅಂತ ರಾಜಕೀಯ ಮಾಡಲು ಹೊರಟಿದ್ದಾರೆ. ನನ್ನನ್ನು ಯಾರೂ ಕೂಡ ವೇದಿಕೆಯಿಂದ ಕೆಳಗೆ ಇಳಿಸಿಲ್ಲ. ಯಾರೋ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದ ಜನ ನನ್ನ ಜೊತೆಗಿದ್ದಾರೆ. ಸತ್ಯಾಸತ್ಯತೆ ಏನು ಎಂಬುದು ವೇದಿಕೆ ಮೇಲಿದ್ದವರಿಗೇನೆ ಗೊತ್ತಿದೆ. ಆ ಕಾರ್ಯಕ್ರಮಕ್ಕೆ ಜನ ಪ್ರೀತಿಯಿಂದ ಸ್ಚಾಗತ ಮಾಡಿಕೊಂಡ ವಿಡಿಯೋ ಇದೆ. ಹಾಗಾದ್ರೆ ಅದು ಸುಳ್ಳಾ..? ಎಂದು ಪ್ರಶ್ನಿಸಿದ್ದಾರೆ.
ನಾನು ಬರುವುದು ತಡವಾದರೆ ಕಾಯಬೇಡಿ ಕಾರ್ಯಕ್ರಮ ಮುಂದುವರೆಸಿ ಎಂದೇ ಹೇಳಿದ್ದೆ. ಆದರೂ ನನಗಾಗಿ ಕಾದಿದ್ದಾರೆ. ಆದ್ರೆ ಮಾಜಿ ಶಾಸಕನ ಪುತ್ರ ಯಾರಿಗಾಗಿಯೋ ಕಾಯುವುದು ಬೇಡ. ಕಾರ್ಯಕ್ರಮ ಶುರು ಮಾಡಿ ಅಂತ ಹೇಳಿದ್ದಾರೆ. ನಾನು ವೇದಿಕೆ ಮೇಲೆ ಶಾಲೆ, ಕ್ರೀಡೆ, ಶಿಕ್ಷಣದ ಬಗ್ಗೆಯೇ ಮಾತನಾಡಿದ್ದೆ. ಕೆಲವರು ಹೇಳಿದರು ಮಾಜಿ ಶಾಸಕನ ಪುತ್ರ ನಿಮ್ಮ ಬಗ್ಗೆ ಮಾತನಾಡಿದ್ದಾರೆ, ನೀವೂ ಮಾತನಾಡಿ ಎಂದಿದ್ದರು. ಆದರೂ ನಾನು ಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಲಿಲ್ಲ. ಚುನಾವಣೆ ಬಂದಿದೆ ಎಂದು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಅಂದಿನ ವಿಡಿಯೋವನ್ನು ತೋರಿಸಿದ್ದಾರೆ.