ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 19 : ಮಧ್ಯಮ ವರ್ಗದವರ ಆಶಾಕಿರಣವಾಗಿರುವ ಸಹಕಾರಿ ಸಂಸ್ಥೆಗಳು ಪರಸ್ಪರ ನಂಬಿಕೆ ವಿಶ್ವಾಸವನ್ನು ಕಾಪಾಡಿಕೊಂಡು ವ್ಯವಹರಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಿಳಿಸಿದರು.
ರೈತ ಭವನ ಸಮೀಪ ಸೋಮವಾರ ಕಾಮಧೇನು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಐದನೆ ಶಾಖೆ ಉದ್ಘಾಟಿಸಿ ಮಾತನಾಡಿದರು.
ಇಪ್ಪತ್ತು ವರ್ಷಗಳ ಇತಿಹಾಸವಿರುವ ಈ ಸಂಸ್ಥೆ ಎಲ್ಲಾ ವರ್ಗದವರಿಗೆ ಸಾಲ ಸೌಲಭ್ಯ ನೀಡುತ್ತ ಸಮಾಜಮುಖಿಯಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಈ ಭಾಗದ ಜನರಿಗೆ ಇದರ ಪ್ರಯೋಜನ ಲಭಿಸಲಿ ಎಂದು ಹೇಳಿದರು.
ಕಾಮಧೇನು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ವೆಂಕಟಪ್ಪ ಮಾತನಾಡಿ ಗ್ರಾಹಕ ಸ್ನೇಹಿ ಯೋಜನೆಗಳನ್ನು ಈ ಸಂಸ್ಥೆ ಜಾರಿಗೆ ತಂದಿದ್ದು, ಲಾಭದ ಸಿಂಹಪಾಲು ಉಳಿತಾಯ ಮಾಡುವವರಿಗೆ ಸಿಗಲಿದೆ. ಸ್ವ-ಉದ್ಯೋಗ ಕೈಗೊಳ್ಳುವವರಿಗೆ ಸಾಲ ಸೌಲಭ್ಯ ದೊರಕಿಸಿ ಸಹಕಾರಿ ತತ್ವದಡಿಯಲ್ಲಿ ಮುನ್ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಖಾ ವ್ಯವಸ್ಥಾಪಕ ಶ್ರೀನಾಥ್ ಮಾತನಾಡುತ್ತ ಹದಿನೈದು ವರ್ಷಗಳ ಕಾಲ ಸಹಕಾರಿ ಕ್ಷೇತ್ರದಲ್ಲಿ ಅನುಭವವಿದ್ದು, ಈ ಭಾಗದ ಜನತೆಗೆ ಸೇವೆ ಒದಗಿಸುವ ಉದ್ದೇಶದಿಂದ ಇಲ್ಲಿ ನೂತನ ಶಾಖೆಯನ್ನು ಆರಂಭಿಸಿದ್ದು, ಅನುಕೂಲಕರ ಯೋಜನೆಗಳನ್ನು ಅನುಷ್ಟಾನಗೊಳಿಸುವುದಾಗಿ ಷೇರುದಾರರಿಗೆ ಭರವಸೆ ನೀಡಿದರು.
ಮೈಸೂರು, ರಾಮನಗರ, ಮಂಡ್ಯ, ದಾವಣಗೆರೆ, ಹುಬ್ಬಳ್ಳಿ ಶಾಖೆಯ ಸಿಬ್ಬಂದಿಗಳು ಹಾಗೂ ಷೇರುದಾರರು ಈ ಸಂದರ್ಭದಲ್ಲಿ ಹಾಜರಿದ್ದರು. ರಕ್ಷಾ ಪ್ರಾರ್ಥಿಸಿದರು, ಶಿವಾನಂದ್ ನಿರೂಪಿಸಿದರು.




