ನೆಲಮಂಗಲ: ಮುಂಬರುವ ವಿಧಾನಸಭಾ ಚುನಾವಣೆಗೆ ಸಾಕಷ್ಟು ಜನ ಆಕಾಂಕ್ಷಿಗಳು ಈಗಲೇ ರೆಡಿಯಾಗಿದ್ದಾರೆ. ಟಿಕೆಟ್ ಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿವೆ. ಈ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಮಾಜಿ ಸಚಿವ ಅಂಜನಮೂರ್ತಿ ಡಿ ಕೆ ಶಿವಕುಮಾರ್ ಬಗ್ಗೆ ಸಾಕಷ್ಟು ಸಂತಸ ವ್ಯಕ್ತಪಡಿಸಿದ್ದಾರೆ.
ನೋಡು ಗುರು ಟಿಕೆಟ್ ಕೊಡ್ತೀನಿ, ಗೆದ್ದು ಬಂದು ಮಿನಿಸ್ಟರ್ ಆಗು ಅಂತ ಆರು ತಿಂಗಳ ಹಿಂದೆ ಅಭಿಮಾನದ ಮಾತುಗಳನ್ನ ಹೇಳಿದ್ದಾರೆ. ಈ ಮಾತನ್ನ ಸಿದ್ದರಾಮಯ್ಯನವರು ಜೊತೆಗೆ ಹೇಳಬೇಕು ಎಂದು ನಗರದ ಹೊರವಲಯದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದಾರೆ.
ಯಾಕಂದ್ರೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನ ಈಗಾಗಲೇ ಜೋಡೆತ್ತು ಎಂದೆ ಕರೆಯುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಸಹಕಾರವೂ ಬೇಕು. ಸಿದ್ದರಾಮಯ್ಯ ನಮ್ಮ ನಾಯಕರು. ನಮ್ಮ ಪಕ್ಷ ಸಮುದ್ರ ಇದ್ದಂಗೆ. ನಮ್ಮ ಪಕ್ಷಕ್ಕೆ ಯಾರೇ ಬಂದ್ರು ಸ್ವಾಗತಿಸುತ್ತೇವೆ. ನನಗೆ ಪಕ್ಷವೇ ಎಲ್ಲವನ್ನು ಕೊಟ್ಟಿದ್ದು. ಬಂಡಾಯ ಅನ್ನೋದು ಇತಿಹಾಸದಲ್ಲೇ ಇಲ್ಲ. ಪಕ್ಷದ ತೀರ್ಮಾನವೇ ಅಂತಿಮ.
ನನ್ನ ಜನರ ಮೇಲೆ ನನಗೆ ನಂಬಿಕೆ ಇದೆ. ಇಲ್ಲಿಯೇ ಹುಟ್ಟಿದ ಜನರಿಗೆ ಅವಕಾಶ ಕೊಡಿ, ನೆರೆಯವರಿಗೆ ಅವಕಾಶ ಕೊಡಬೇಡಿ. ಕಳೆದ ಬಾರಿ ನಂಬಿಕೆಗೆ ದ್ರೋಹ ಆಗಿತ್ತು, ಈಗ ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ನಾನು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದಿದ್ದಾರೆ.