ಹೊಳಲ್ಕೆರೆ. (ಅ.16) : ತಾಲೂಕಿನಾದ್ಯಂತ ಸುರಿದ ಭಾರೀ ಮಳೆಗೆ ಸಾಕಷ್ಟು ಜನ ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ ಅವರೆಲ್ಲರಿಗೂ ಕೂಡಲೇ ಸರ್ಕಾರ ಕೂಡಲೇ ಪರಿಹಾರ ಒದಗಿಸಿಕೊಡಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹಿಸಿದರು.
ತಾಲೂಕಿನ ಚಿತ್ರಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಂಡಾಪುರ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ, ಮನೆ ಕುಸಿತದಿಂದ ಕಂಗಾಲಾಗಿದ್ದ
ಸಂತ್ರಸ್ತರಾದ ಮಡಿವಾಳ ಓಂಕಾರಪ್ಪ, ಎ.ಕೆ.ಕಾಲೋನಿಯ ಉಮಕ್ಕ, ಸುಮಿತ್ರಮ್ಮ, ಕದ್ರಪ್ಪ, ಲಿಂಗರಾಜು, ಲಕ್ಷ್ಮೀದೇವಿ, ಕರಿಯಪ್ಪ ಹಾಗೂ ಪ್ರೇಮಕ್ಕ ಎಂಬುವವರಿಗೆ ಸಾಂತ್ವನ
ಹೇಳಿ ಮಾತನಾಡಿದರು.
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ
ಅಕ್ಷರಶಃ ಮನೆಗಳು ಕೊಚ್ಚಿ ಹೋಗಿವೆ. ತಾಲೂಕಿನ ಹಲವು ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ.ಜನರು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಇಷ್ಟಾದರು ಕೂಡ
ಇಲ್ಲಿಯವರೆಗೆ ಯಾವ ಜನಪ್ರತಿನಿಧಿ ಹಾಗೂ
ಅಧಿಕಾರಿ ಕೂಡ ಗ್ರಾಮಗಳಿಗೆ ಭೇಟಿ ನೀಡಿಲ್ಲ.
ಕೂಡಲೇ ಜಿಲ್ಲಾಡಳಿತ ಇತ್ತ ಗಮನ ಹರಿಸಿಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ತಾಲೂಕಿನ ಚಿತ್ರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಇತ್ತೀಚೆಗೆ ಯುಪಿಎಸ್ ವಿದ್ಯುತ್ ಶಾಕ್‍ನಿಂದ ಮೃತಪಟ್ಟ ಶೃತಿ ಎಂಬುವವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಚಿತ್ರಹಳ್ಳಿ ಗ್ರಾಪಂ ಅಧ್ಯಕ್ಷ ಕಾಟಲಿಂಗಪ್ಪ, ಉಪಾಧ್ಯಕ್ಷೆ
ನಿಂಗಮ್ಮ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.