ಶಿವಮೊಗ್ಗ: ಹಿಂದೂಗಳ ಮೇಲೆ ಆಗುತ್ತಿರುವಂತ ಘಟನೆಗಳ ಬಗ್ಗೆ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ಬಗ್ಗೆ ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ತರುತ್ತೇನೆ. ನಾನು ರಾಜೀನಾಮೆ ಕೊಟ್ಟಿದ ದಿನದಿಂದ ಈ ನಿಮಿಷಕ್ಕೂ ಕೂಡ ಎಲ್ಲಾ ಜಗದ್ಗುರುಗಳು ಬಂದು ಹೋಗಿದ್ದಾರೆ. ಪೇಜಾವರ ಶ್ರೀಗಳು, ಹಿಂದುಳಿದ ಹಾಗೂ ದಲಿತ ಪರ ಮಠಾಧಿಪತಿಗಳು ಬಂದು ಬಂದು ಆಶೀರ್ವಾದ ಮಾಡಿ ಹೋಗುತ್ತಿದ್ದಾರೆ. ಅವರ ಆಶೀರ್ವಾದ ಸಿಗುತ್ತಿರುವುದು ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಅವರ ಅಪೇಕ್ಷೆಯಂತೆ ಈ ಆಪಾದನೆಯಿಂದ ಹೊರ ಬರುತ್ತೇನೆ. ಹಿಂದೂ ಧರ್ಮದ ಮತ್ತು ದೇಶದ ಕೆಲಸವನ್ನು ಇನ್ನು ಹೆಚ್ಚು ಜೀವಂತ ಇರುವ ತನಕ ಮಾಡುತ್ತೇನೆ ಎಂದಿದ್ದಾರೆ.
ಹಿಂದೂಗಳ ಹನುಮ ಜಯಂತಿ, ರಾಮನ ಉತ್ಸವ ಇರಬಹುದು ಇದರ ಮೇಲೆ ಆಘಾತಕಾರಿ ಕೃತ್ಯವನ್ನು ನಡೆಸುತ್ತಿರುವವರು ಶಾಂತಿಯಿಂದ ಹೋಗುತ್ತಿರುವ ಹನುಮ ಜಯಂತಿ ಮೇಲೆ ಕಲ್ಲು ಹೊಡೆಯುವುದು ಇವೆಲ್ಲವನ್ನು ನೋಡಿದಾಗ ಎಷ್ಟು ಸಹಿಸಿಕೊಂಡು ಇರಬೇಕು. ಪೇಜಾವರ ಶ್ರೀಗಳು ಹೇಳಿದಂತೆ ಆ ಮಾತು ಈಗಲೂ ಆಘಾತ ತರುತ್ತಿದೆ.
ಒಂದು ಕಡೆ ಹಿಂದೂಗಳು ಮಾತ್ರ ಎಲ್ಲದಕ್ಕೂ ಹೊಂದಿಕೊಂಡು ಹೋಗಬೇಕು. ಇನ್ನೊಂದು ಕಡೆ ಅನ್ಯ ಧರ್ಮೀಯರು ತೊಂದರೆ ಕೊಡಬಾರದು. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಮುಸಲ್ಮಾನ ಬಂಧುಗಳು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲಾ ಒಟ್ಟಾಗಿ ಇರಬೇಕೆಂದು ಜಗದ್ಗುರುಗಳು ಹೇಳಿದ್ದರು ಕೂಡ ಇದಕ್ಕೆ ಮುಸಲ್ಮಾನ ಬಂಧುಗಳು ಮಾಡುತ್ತಿರುವ ಆಕ್ರೋಶದ ನಡೆಗಳು, ಹಿಂಸಾಚಾರಗಳನ್ನು ಅವರು ತಿದ್ದಿಕೊಳ್ಳಬೇಕೆಂದು ನೇರವಾಗಿ ಜಗದ್ಗುರುಗಳು ಅವರ ಮಾತಲ್ಲಿ ಹೇಳಿದ್ದಾರೆ. ಜಗದ್ಗುರುಗಳ ಹೇಳಿದಂತೆ ಮುಸಲ್ಮಾನರು ತಿದ್ದಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.