ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಆಲ್ ರೌಂಡರ್ ಸಲೀಂ ದುರಾನಿ ನಿಧನರಾಗಿದ್ದಾರೆ. 88 ವರ್ಷದ ಧುರಾನಿಗೆ ಬಹಳ ದಿನಗಳಿಂದ ಅನಾರೋಗ್ಯ ಕಾಡುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ದುರಾನಿ ಅವರು ಗುಜರಾತ್ ನ ಜಾಮ್ನಾ ನಗರದಲ್ಲಿ ವಾಸವಾಗಿದ್ದರು. ಒಮ್ಮೆ ಕಾಲು ಜಾರಿ ಕೆಳಗೆ ಬಿದ್ದು ಮೊಣಕಾಲು ಮುರಿದುಕೊಂಡಿದ್ದರು. ಅಂದಿನಿಂದ ಅವರನ್ನು ಅನಾರೋಗ್ಯ ಕಾಡುತ್ತಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇದೀಗ ಇಹಲೋಕ ತ್ಯಜಿಸಿದ್ದಾರೆ.
ದುರಾನಿ ಅವರು ಮೂಲತಃ ಆಫ್ಘಾನ್ ನಲ್ಲಿ ಜನಿಸಿದವರು. ಆದರೆ ಭಾರತದಲ್ಲಿ ನೆಲೆಸಿ, ಕ್ರಿಕೆಟ್ ಗೆ ಕೂಡ ಸೇರಪಡೆಯಾಗಿದ್ದರು. ಲೆಫ್ಟ್ ಹ್ಯಾಂಡ್ ಬೌಲರ್ ಮತ್ತು ಬ್ಯಾಟ್ಸ್ಮನ್ ಆಗಿದ್ದವರು ದುರಾನಿ. 1960 ರಿಂದ 1973 ರ ತನಕ ಭಾರತ ತಂಡದಲ್ಲಿ ಅಮೋಘವಾದ ಪ್ರದರ್ಶನ ನೀಡಿದ್ದರು. ಸರಳವಾಗಿಯೆ ಸಿಕ್ಸರ್ ಬಾರಿಸುತ್ತಿದ್ದವರು. 1973ರಲ್ಲಿ ಕೊನೆಯ ಟೆಸ್ಟ್ ಮ್ಯಾಚ್ ಆಡಿದ್ದರು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.
ಹೈದ್ರಾಬಾದ್ ನಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಐಪಿಎಲ್ ಪಂದ್ಯದ ಆರಂಭಕ್ಕೂ ಮುನ್ನ ಎರಡು ತಂಡಗಳು ದುರಾನಿ ಅವರಿಗೆ ಸಂತಾಪ ಸೂಚಿಸಿದ್ದಾರೆ. ಒಂದು ನಿಮಿಷ ಮೌನಾಚರಣೆ ಆಚರಿಸಿದ್ದಾರೆ.