ಹುಟ್ಟುಹಬ್ಬಕ್ಕೂ ಮೊದಲೇ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ ನಿಧನ..!

1 Min Read

ಬೆಂಗಳೂರು: ಹುಟ್ಟು ಯಾವಾಗ ಅಂತ ಸರಿಯಾಗಿ ಹೇಳಬಹುದು. ಆದರೆ ಸಾವು ಯಾವಾಗ ಅನ್ನೋದಿರಲಿ, ಹೇಗೆ ಬರುತ್ತೆ, ಎಲ್ಲಿ ಬರುತ್ತೆ ಎಂಬುದನ್ನು ಹೇಳುವುದಕ್ಕೂ ಯಾರಿಂದಲೂ ಸಾಧ್ಯವಿಲ್ಲ. ಆರ್ ವಿ ದೇವರಾಜ್ ಅವರ ಸಾವು ಹಾಗೇ ಆಗಿದೆ. ಚಾಮುಂಡಿ ತಾಯಿಯ ದರ್ಶನ ಪಡೆಯಲು ಹೋದಾಗಲೂ ಈ ಘಟನೆ ನಡೆದಿದೆ‌. ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರಿಗೆ ಹೃದಯಾಘಾತವಾಗಿದ್ದು, ಇಂದು ನಿಧನರಾಗಿದ್ದಾರೆ. ರೋಣೂರು ವೆಂಕಟೇಶಪ್ಪ ದೇವರಾಜ್ ಅವರು ಚಾಮರಾಜಪೇಟೆ ಜನರ ಅಚ್ಚುಮೆಚ್ಚಿನ ನಾಯಕರಾಗಿದ್ದರು. ಆದ್ರೆ ವಿಧಿ ಅವರನ್ನ ತನ್ನ ಜೊತೆಗೆ ಬಾರದ ಲೋಕಕ್ಕೆ ಕರೆದುಕೊಂಡು ಹೋಗಿದೆ. ಆರ್ ವಿ ದೇವರಾಜ್ ಅವರು ಚಿಕ್ಕಪೇಟೆಯ ಮಾಜಿ ಶಾಸಕರಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಹಲವು ಹುದ್ದೆಗಳನ್ನ ನಿಭಾಯಿಸಿದ್ದರು.

ನಾಳೆ ಅಂದ್ರೆ ಡಿಸೆಂಬರ್ 3 ರಂದು ಆರ್ ವಿ ದೇವರಾಜ್ ಅವರ ಹುಟ್ಟುಹಬ್ಬ. ಹೀಗಾಗಿ ನಿನ್ನೆ ಮೈಸೂರಿಗೆ ತೆರಳಿದ್ದರು. ಚಾಮುಂಡಿ ತಾಯಿಯ ದರ್ಶನವನ್ನು ಮಾಡಿದ್ರು. ದರ್ಶನದ ಬಳಿಕ ಹಾರ್ಟ್ ಅಟ್ಯಾಕ್ ಆಗಿದೆ. ತಕ್ಷಣ ಅವರನ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾದರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಆರ್ ವಿ ದೇವರಾಜ್ ಅವರು ಡಿಸೆಂಬರ್ 3, 1970ರ ದಶಕದಲ್ಲಿ ಯುವ ಕಾಂಗ್ರೆಸ್ ನೊಂದಿಗೆ ರಾಜಕೀಯ ಆರಂಭಿಸಿದ್ರು. ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಆಗಿ ಮೊದಲು ಸೇವೆ ಸಲ್ಲಿಸಿದ್ದಾರೆ. ಬಳಿಕ 1989ರಲ್ಲಿ ಚಾಮರಾಜಪೇಟೆಯಿಂದ ವಿಧಾನಸಭೆಗೆ ಪ್ರವೇಶಿದ್ದರು. ಸತತ ಎರಡು ಬಾರಿ ಚಾಮರಾಜಪೇಟೆಯಿಂದ ಗೆಲುವು ಸಾಧಿಸಿದ್ರು. ಅಲ್ಲದೆ ಕೆಎಸ್ಆರ್ಟಿಸಿಯ ಅಧ್ಯಕ್ಷರಾಗಿ ಎರಡು ಬಾರಿ, 2000 ದಿಂದ 2007 ರವರೆಗೆ ಕೆಎಸ್ಆರ್ಟಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Share This Article
Enable Notifications OK No thanks