ಹುಬ್ಬಳ್ಳಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರ ಬಳಿಗೆ ತಲುಪುವ ಕೆಲಸವೂ ಜೋರಾಗಿ ಆಗುತ್ತೆ. ಮೂರು ಪಕ್ಷಗಳು ಒಂದೊಂದು ಯಾತ್ರೆ ಮಾಡಿಕೊಂಡು ಜನರ ನೋವು ಸಂಕಷ್ಟವನ್ನು ಕೇಳುತ್ತಿದೆ. ಜೆಡಿಎಸ್ ನಿಂದಾನು ಪಂಚರತ್ನ ಯಾತ್ರೆ ಸಾಗುತ್ತಿದೆ. ಹೀಗಾಗಿ ಕುಮಾರಸ್ವಾಮಿ ಅವರು ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗುತ್ತಿಲ್ಲ.
ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಪಂಚರತ್ನ ಯಾತ್ರೆಗೆ ಹೋದಲೆಲ್ಲಾ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಜನವರಿ 3ರಿಂದ ಬೀದರ್ ನಿಂದ ಯಾತ್ರೆ ಆರಂಭವಾಗಲಿದೆ. 2023 ಫೆಬ್ರವರಿಯಲ್ಲಿ ಬೆಳಗಾವಿ ಭಾಗದಲ್ಲಿ ಯಾತ್ರೆ ಆರಂಭ ಮಾಡಲಾಗುತ್ತದೆ. ಹೀಗಾಗಿ ಈ ಬಾರಿಯ ಚಳಿಗಾಲದ ಅಧಿವೇಸದನಕ್ಕೆ ನಾನು ಹೋಗುವುದಿಲ್ಲ. ಆದರೆ ನಮ್ಮ ಅನುಪಸ್ಥಿತಿಯಲ್ಲಿ ಬಂಡೆಪ್ಪ ಕಾಶೆಂಪೂರ್ ಸಮಸ್ಯೆ ಬಗ್ಗೆ ಚರ್ಚಿಸುತ್ತಾರೆ ಎಂದಿದ್ದಾರೆ.
ಇನ್ನು ಬಿಜೆಪಿ ಬಗ್ಗೆ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯದ ಬಗ್ಗೆ ಬಿಜೆಪಿ ಕಿಂಚಿತ್ತೂ ಗಮನ ಹರಿಸಲ್ಲ. ಒಬ್ಬರು ಹೊಡೆದವರಂತೆ ಮಾಡಿದರೆ ಮತ್ತೊಬ್ಬರು ಅತ್ತ ಹಾಗೆ ಮಾಡುತ್ತಾರೆ. ಘೋಷಣೆಗೆ ಮಾತ್ರ ಬಿಜೆಪಿ ಸರ್ಕಾರ ಸೀಮಿತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.