ಬೆಂಗಳೂರು: ಈ ಬಾರಿಯೂ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ಸೋಲು ಕಂಡಿದ್ದಾರೆ. ಮಗನಿಗೆ ಸೋಲಾಗಿದ್ದರ ಹಿಂದೆ ಇರುವ ಕಾರಣದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದಾರೆ. ಆ ಕಾರ್ಡ್ ತೋರಿಸಿ ಆಕ್ರೋಶ ಹೊರ ಹಾಕಿದ್ದಾರೆ.
ರಾಮನಗರದಲ್ಲಿ ನನ್ನ ಮಗ ನಿಖಿಲ್ ಕುಮಾರಸ್ವಾಮಿಯನ್ನು ನ್ಯಾಯಯುತವಾಗಿ ಸೋಲಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನರ್ ಅಂದ್ರಿ. ಆದರೆ ನೀವೂ ಈ ಕೂಪನ್ ಗೆ ಎಷ್ಟು ಪರ್ಸಂಟೇಜ್ ಫಿಕ್ಸ್ ಮಾಡಿದ್ರಿ. ಮತದಾನ ಆರಂಭವಾಗುವುದಕ್ಕೂ ಮುನ್ನ ಬೆಳಗಿನ ಜಾವ 4 ಗಂಟೆಗೆ ಹಂಚಿರುವ ಕೂಪನ್ ಇದು.
ಚುನಾವಣೆ ನಡೆದು ಎರಡು ದಿನವಾದ ಮೇಲೆ ನಂಗೆ ಈ ಕೂಪನ್ ಸಿಕ್ಕಿದ್ದು. ನಮ್ಮ ಬಳಿ ಬಂದು ಕಾಂಗ್ರೆಸ್ ನವರು ಈ ಕೂಪನ್ ಹಂಚಿದರು ಎಂದು ಹೇಳಿದರು. ಇದರಿಂದಾಗಿಯೇ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದೆ. ಇದರಿಂದಾನೇ ನಿಖಿಲ್ ಸೋಲಾಗಿದೆ. ಅದು ಐದು ಸಾವಿರದ ಕೂಪನ್ ಆಗಿದೆ. ಗೆದ್ದ ಮೇಲೆ ಕೊಡುತ್ತೀವಿ ಅಂತ ಹೇಳಿದ್ದಾರೆ. ಜನರಿಗೆ ಆಮಿಷವೊಡ್ಡಿ ಗೆಲುವು ಕಂಡಿದ್ದಾರೆ ಎಂದಿದ್ದಾರೆ.





GIPHY App Key not set. Please check settings