ವಿನಯ್ ಸೋಮಯ್ಯ ಸಾವಿನ ಕುರಿತು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಬಿಜೆಪಿ ನಾಯಕರು ಕೂಡ ವಿನಯ್ ಸೋಮಯ್ಯ ಸಾವಿಗೆ ನ್ಯಾಯ ಸಿಗಬೇಕು ಎಂದು ಹೋರಾಟ ನಡೆಸುತ್ತಿದ್ದಾರೇ. ಇದರ ನಡುವೆ ಮತ್ತೊಂದು ವಿಚಾರ ಬಯಲಿಗೆ ಬಂದಿದೆ. ಅದುವೆ ವಿನಯ್ ಸೋಮಯ್ಯ ತನ್ನ ಸಾವಿಗೂ ಮುನ್ನ ಹೆಂಡತಿಗೆ ಪತ್ರ ಬರೆದಿರುವುದು. ಆದರೆ ಈ ಪತ್ರವನ್ನ ನೇರವಾಗಿ ಹೆಂಡತಿಗೆ ತಲುಪಿಸಿಲ್ಲ, ಬದಲಿಗೆ ಬಾಮೈದ ಸುಶಾಂತ್ ಗೆ ನೀಡಿ, ಅಕ್ಕನಿಗೆ ಕೊಡಲು ಹೇಳಿದ್ದಾರೆ. ಅಷ್ಟಕ್ಕೂ ಆ ಪತ್ರದಲ್ಲಿ ಏನಿದೆ..?

ಮೊದಲು ಸುಶಾಂತ್ ಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಸುಶಾಂತ್ ಈ ಮೆಸೇಜ್ ನ ಶೋಬಿಗೆ ಫಾರ್ ವರ್ಡ್ ಮಾಡಬೇಡ. ನೀನೆ ಹೋಗಿ ತೋರಿಸು. ಅವಳು ಈ ಮೆಸೇಜ್ ಓದುವಾಗ ನಾನು ಈ ಲೋಕದಲ್ಲಿ ಇರುವುದಿಲ್ಲ. ಕ್ಷಮಿಸು ಸುಶಾಂತ್. ಸಾಧ್ವಿನಾ ಚೆನ್ನಾಗಿ ನೋಡಿಕೊ. ನೀನು ಇನ್ಮೇಲೆ ಬೇರೆ ರೂಮಲ್ಲಿ ಇರೋದು ಬೇಡ. ಶೋಭಿ ಜೊತೆಗೆ ಸ್ಟೇ ಆಗು. ಶೋಭಿ ಹಾಗೂ ಸಾಧ್ವಿಗೆ ಹೆಲ್ಪ್ ಆಗುತ್ತೆ. ಬೆಳಗ್ಗೆ ಹೋಗಿ ಸಾಧ್ವಿ ಬ್ಯಾಗ್ ಪ್ಯಾಕ್ ಮಾಡು. ಕಾರಿನ ಡಾಕ್ಯುಮೆಂಟ್ಸ್ ನನ್ನ ಆಫೀಸ್ ಕೊಲಿಗ್ ರಜತ್ ಗೆ ಹೇಳು ಶೋಭಿ ಅಥವಾ ನಿನ್ನ ಹೆಸರುಗೆ ಟ್ರಾನ್ಸ್‌ಫರ್ ಮಾಡೋದಕ್ಕೆ. ಬೈಕ್ ಕೀ ಹಾಳಾಗಿದೆ. ಮೆಕ್ಯಾನಿಕ್ ಕರೆಸಿ, ಸರಿ ಮಾಡಿಸಿ ಅಣ್ಣಂಗೆ ಕೊಡು ಎಂದಿದ್ದಾರೆ. ಬಳಿಕ ಹೆಂಡತಿಯ ಬಗ್ಗೆ ಬರೆದಿದ್ದು, ಈ ಲೆಟರ್ ನ ಸುಶಾಂತ್ ಗೆ ಕಳುಹಿಸಿದ್ದು ಯಾಕಂದ್ರೆ ನೇರವಾಗಿ ನಿನಗೆ ಕಳುಹಿಸಿದ್ರೆ ನಿನ್ನನ್ನು ಸಂಭಾಳಿಸುವವರು ಯಾರು ಇರುವುದಿಲ್ಲ. ಸಾರಿ. ಇದು ಕ್ಷಮಿಸುವ ತಪ್ಪ. ನನಗೆ ಗೊತ್ತು. ಎರಡು ತಿಂಗಳಿನಿಂದ ನನ್ನ ಮನಸ್ಸು ಕಂಟ್ರೋಲ್ ಗೆ ಬರ್ತಿಲ್ಲ. ನನ್ನ ಮೇಲೆ ಹಾಕಿದ ಎಫ್ಐಆರ್ ಗೆ ನಿನಗೆ, ಚಾಚಾಗೆ ಎಷ್ಟು ಬೇಜಾರಾಗಿದೆ ಅಂತ ಗೊತ್ತಿದೆ. ಅವರು ಇನ್ನು ನಮ್ಮ ಫೋಟೋ ಹಾಕಿ ಕಿಡಿಗೇಡಿಗಳು ಅಂತ ಮಾತಾಡ್ತಾ ಇದಾರೆ. ನಮ್ಮ ಮೇಲೆ ರೌಡಿಶೀಟ್ ಹಾಕೋಕೆ ಟ್ರೈ ಮಾಡ್ತಾ ಇದಾರೆ. ಕಳೆದ ವಾರ ಮಡಿಕೇರಿ ಕಾಲ್ ಮಾಡಿ, ತಹಶಿಲ್ದಾರ್ ಮುಂದೆ ಸಹಿ ಮಾಡುವಂತೆ ಫೋರ್ಸ್ ಮಾಡಿದರು. ಜಾಮೀನು ಸಿಕ್ಕಿದ ನಂತರವು ರಜತ್ ಮನೆ ಬಳಿ ಹೋಗಿ ನನ್ನ ಮನೆ ಅಡ್ರೆಸ್ ಕೇಳಿದ್ದಾರೆ.

ಎಷ್ಟೇ ಪ್ರಯತ್ನ ಪಟ್ಟರು ಮರೆಯುವುದಕ್ಕೆ ಸಾಧ್ಯವಾಗ್ತಿಲ್ಲ. ನಿನ್ನನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಸಾಧ್ವಿ ಒಂದು ವಾರ ಕೇಳಬಹುದು. ಅವಳಿಗೆ ನೀನಿದ್ದರೆ ಸಾಕು. ಅವಳಿಗೆ ನೀನರ ಪ್ರಪಂಚ. ನಾನಿಲ್ಲ ಅಂತ ನಮ್ಮ ಮನೆಯವರನ್ನು ದೂರ ಮಾಡಬೇಡ. ನನಗೆಷ್ಟು ಇಷ್ಟವೋ ಅಷ್ಟೇ ನಮ್ಮ ಮನೆಯವರಿಗೂ ನೀನು ಇಷ್ಟ. ಏನೇ ಇದ್ದರು ಅಣ್ಣನನ್ನು ಕೇಳು. ಅವನು ನನಗೆ ಡ್ಯಾಡಿಯಿದ್ದಂತೆ. ಐ ಲವ್ ಯೂ ಶೋಭಿ..ಸಾಧ್ವಿ.. ಎಂದು ಪತ್ರದಲ್ಲಿ ಬರೆದಿದ್ದಾರೆ. ಪತ್ರ ಓದಿದವರ ಕಣ್ಣಲ್ಲಿ ನೀರೂರಿದೆ.

