ಬೆಂಗಳೂರು: ಈ ಬಾರಿಯ ಬಜೆಟ್ ನಲ್ಲಿ ಏಳನೇ ವೇತನ ಆಯೋಗ ಜಾರಿ ಮಾಡಲಾಗುವುದು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಆದ್ರೆ ಬಜೆಟ್ ನಲ್ಲಿ ಈಡೇರಲೇ ಇಲ್ಲ. ಇದೀಗ ಎಲ್ಲಾ ಸರ್ಕಾರಿ ನೌಕರರು ಒಗ್ಗಟ್ಟಾಗಿದ್ದು, ವೇತನ ಆಯೋಗ ಜಾರಿಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ನಾಳೆ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ, ಬಜೆಟ್ ನಲ್ಲಿ ಈ ಬಗ್ಗೆ ಯಾವುದೇ ರೀತಿಯ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ನಾಳೆಯಿಂದ ಸಾಮೂಹಿಕವಾಗಿ ಪ್ರತಿಭಟನೆ ನಡೆಸುತ್ತೇವೆ. ಎಲ್ಲಾ ಸರ್ಕಾರಿ ಸೇವೆಗಳು ಏಕಕಾಲಕ್ಕೆ ಬಂದ್ ಆಗಲಿವೆ. ಸರ್ಕಾರ ಯಾವುದೇ ಕ್ರಮ ಗೈಗೊಂಡರು ನಾವೂ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಏಳನೇ ವೇತನ ಆಯೋಗ ಜಾರಿಯಾದ್ರೆ ಮಾತ್ರ ನಾವೂ ಮುಷ್ಕರ ವಾಪಾಸ್ ಪಡೆಯುತ್ತೇವೆ. ಇಲ್ಲದೆ ಇದ್ದರೆ ಯಾವ ಸಂಧಾನಕ್ಕೂ ನಾವೂ ಬಗ್ಗುವುದಿಲ್ಲ. ಕಳೆದ 1 ವರ್ಷದಿಂದ ವೇತನ ಪರಿಷ್ಕರಣೆ ಸಂಬಂಧ ಸಿಎಂ ಭರವಸೆ ನೀಡಿದ್ದರು. ಆದ್ರೆ ಇಲ್ಲಿಯ ತನಕ ವೇತನ ಪರಿಷ್ಕರಣೆ ಮಾಡಿಲ್ಲ. ವೇತನ ಆಯೋಗ ಭರವಸೆ ನೀಡಿದೆ. ಆದರೆ ಎಲ್ಲವೂ ಚರ್ಚೆಯ ಹಂತದಲ್ಲಿಯೇ ಇದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.