ಕಲಬುರಗಿ: ಕೋರ್ಟ್ ನಲ್ಲಿ ಕೆಲಸ ಮಾಡಬೇಕು ಎಂದುಕೊಂಡವರಿಗೆ ಅವಕಾಶವೊಂದು ಇಲ್ಲಿದೆ. ಕಲಬುರಗಿ ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನಾಂಕವಾಗಿದೆ.
60 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಪಿಒನ್, ಪ್ರೊಸೆಸ್ ಸರ್ವರ್ ಹುದ್ದೆಗಳು ಖಾಲಿ ಇದೆ. ಅಧಿಕೃತ ಮಾಹಿತಿಗಾಗಿ districts.ecourts.gov.in ಈ ವೆಬ್ಸೈಟ್ ಗೆ ಭೇಟಿ ನೀಡಬಹುದು. ಪಿಯುಸಿ, ಡಿಪ್ಲೋಮಾ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸೈನೋಗ್ರಾಫರ್ – 8, ಟೈಪಿಸ್ಟ್ -9, ಟೈಪಿಸ್ಟ್ – ಕಾಪಿಯಿಸ್ಟ್ -1, ಪಿಒನ್ – 29, ಪ್ರೊಸೆಸ್ ಸರ್ವರ್ – 13 ಹುದ್ದೆಗಳು ಖಾಲಿ ಇದೆ. ಜಿಲ್ಲಾ ನ್ಯಾಯಾಲಯದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ವಯಸ್ಸು ಮಾರ್ಚ್ 25ಕ್ಕೆ 18 ವರ್ಷ ತುಂಬಿರಬೇಕಾಗುತ್ತದೆ. SC/ST ಸಮುದಾಯಕ್ಕೆ 5 ವರ್ಷ ಸಡಿಲಿಕೆ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರಲಿದೆ.
SC/ST ಸಮುದಾಯದವರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಇನ್ನುಳಿದವರಿಗೆ 200 ರೂಪಾಯಿ ಶುಲ್ಕ ಇರಲಿದೆ. ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಾಗಿದೆ. ಮೆರಿಟ್ ಲೀಸ್ಟ್, ಟೈಪಿಂಗ್ ಟೆಸ್ಟ್, ಕಂಪ್ಯೂಟರ್ ಪ್ರಾವಿಣ್ಯತೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ.