ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮಾ.21) : ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಯಲ್ಲಿ ಹೊರಗಿನವರಿಗೆ ಟಿಕೆಟ್ ನೀಡದೇ ಸ್ಥಳೀಯರಿಗೆ ಟಿಕೆಟ್ ನೀಡುವುದರ ಮೂಲಕ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಪಕ್ಷದ ಮುಖಂಡರಿಗೆ ತಾಳ್ಯ ಹೋಬಳಿಯ ಗಿಡ್ಡಣ್ಣನ ಹಳ್ಳಿಯ ಎಸ್.ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಳಲ್ಕೆರೆ ಕ್ಷೇತ್ರದಲ್ಲಿ ಈ ಹಿಂದೆ ಜಯವನ್ನು ಸಾದಿಸಿದ ಹೆಚ್.ಅಂಜನೇಯ ಮತ್ತು ಈಗ ಶಾಸಕರಾಗಿರುವ ಎಂ.ಚಂದ್ರಪ್ಪರವರು ಕಾರ್ಯ ವೈಖರಿಯನ್ನು ಅಲ್ಲಿನ ಮತದಾರರು ನೋಡಿದ್ದಾರೆ ಇಬ್ಬರಿಂದಲೂ ಬೆಸತ್ತಿದ್ದಾರೆ. ಈ ಕ್ಷೇತ್ರಕ್ಕೆ ಇಬ್ಬರು ಬೇಡ ಹೊಸ ಮುಖ ಬೇಕು ಅದರಲ್ಲಿಯೂ ಅವರು ಸ್ಥಳೀಯವಾಗಿ ಇರಬೇಕಿದೆ ಅಂತಹರಿಗೆ ಪಕ್ಷದ ಟೀಕೇಟ್ ನೀಡುವಂತೆ ಮನವಿ ಮಾಡಿದರು.
ನಾನು ಸಹಾ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು, ಸಮಾಜ ಸೇವೆಯಲ್ಲಿ ತೂಡಗಿರುವುದು ಮೂಲಕ ತಾ.ಪಂ.ಸದಸ್ಯನಾಗಿದ್ದು, ನಮ್ಮ ದೊಡ್ಡಪ್ಪನವರು ಸ್ವಾತಂತ್ರ್ಯ ಹೋರಾಟಗಾರಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಟಿಡಿಬಿ ಸದಸ್ಯರಾಗಿದ್ದರು. ಈಗ ಕ್ಷೇತ್ರದಲ್ಲಿ ಈ ಇಬ್ಬರನ್ನು ಮತದಾರರು ನೋಡಿದ್ದಾರೆ.
ಇಬ್ಬರು ಸಹಾ ಕ್ಷೇತ್ರವನ್ನು ಅಭಿವೃದ್ಧಿ ಮಾಡದೆ ತಮ್ಮ ಸ್ವಾರ್ಥಕ್ಕಾಗಿ ಕೆಲಸವನ್ನು ಮಾಡಿದ್ದಾರೆ. ಅಂಜನೇಯ ಮತ್ತು ಸವಿತಾ ರಘು ಇಬ್ಬರು ಹೊರಗಿನವರಾಗಿದ್ದಾರೆ. ಇಲ್ಲಿ ಮತಾದರರು ಸಹಾ ಸ್ಥಳೀಯರಿಗೆ ಪ್ರಾತಿನಿಧ್ಯವನ್ನು ನೀಡಿದ್ದಾರೆ. ಇದರಿಂದ ಈ ಭಾರಿಯ ಚುನಾವಣೆಯಲ್ಲಿ ಸ್ಥಳೀಯರಿಗೆ ಟೀಕೇಟ್ ನೀಡುವುದರ ಮೂಲಕ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದರು.
ವೆಂಕಟೇಶ್ ನಾಯ್ಕ್ ಮಾತನಾಡಿ, ದಲಿತರಾದ ಅಂಜನೇಯರವರು ಇವರ ಬಗ್ಗೆ ಯಾವುದೇ ರೀತಿಯಾದ ಕಾಳಜಿಯನ್ನು ತೋರದೇ ಅವರಿಗೆ ಯಾವುದೇ ರೀತಿಯ ಸಹಾಯವನ್ನು ಮಾಡದೇ ಸ್ವಾರ್ಥಿಗಳಾಗಿದ್ದಾರೆ. ಇಬ್ಬರ ಮೇಲೂ ಕ್ಷೇತ್ರದ ಮತದಾರರಿಗೆ ನಂಬಿಕೆ ಇಲ್ಲದಾಗಿದೆ. ಸಚಿವರಾದ ಮೇಲೆ ಅಪಾರವಾದ ಅಸ್ತಿಯನ್ನು ಮಾಡಿದ್ದಾರೆ. ಅವರು ಮಾತನ್ನು ಕೇಳುವವರಿಗೆ ಮಾತ್ರ ಅನುಕೂಲವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಅಂಜನೇಯರವರು ಮಂತ್ರಿಗಳಾಗಿದಾಗ 1200 ಕೋಟಿಯಷ್ಟು ಹಣವನ್ನು ದಲಿತರಿಗಾಗಿ ಉಪಯೋಗ ಮಾಡದೇ ಹಾಗೇಯೇ ಬಿಟ್ಟಿದ್ದರು, ಎಸ್. ಸಿ. ಕ್ಷೇತ್ರವಾದರೂ ಅಭೀವೃದ್ದಿಯಲ್ಲಿ ಮಾತ್ರ ಹಿಂದೆ ಬಿದಿದ್ದೆ, ಅವರ ಬಳಿ ಏನಾದರೂ ಕೆಲಸವಾಗಬೇಕಾದರೇ ಕ್ಯೂನಲ್ಲಿ ನಿಲ್ಲಬೇಕಿತ್ತು ಎಂದು ಮಾಜಿ ಸಚಿವ ಅಂಜನೇಯರವರ ಕಾರ್ಯ ವೈಖರಿಯನ್ನು ಟೀಕಿಸಿದರು.
ಬೋವಿ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ, ಮಾಜಿ ಸಚಿವರಾದ ಅಂಜನೇಯರವರಿಗೆ ಈ ಭಾರಿ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಿದರೆ ಸೋಲು ಗ್ಯಾರೆಂಟಿ ಈ ಹಿನ್ನಲೆಯಲ್ಲಿ ಈ ಬಾರಿ ಪಕ್ಷದ ಟೀಕೇಟ್‍ನ್ನು ಸ್ಥಳಿಯರಿಗೆ ನೀಡುವುದರ ಮೂಲಕ ಪಕ್ಷವನ್ನು ಗೆಲ್ಲಿಸಬೇಕಿದೆ. ಇದರ ಬಗ್ಗೆ ಪಕ್ಷದ ನಾಯಕರ ಬಳಿ ಮಾತನಾಡಿದ್ದು ಅವರು ಸಹಾ ನಮ್ಮ ಮಾತನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎಂದರು.