ಚಿತ್ರದುರ್ಗ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

2 Min Read

ಬೆಂಗಳೂರು, ಅಕ್ಟೋಬರ್ 30 : ಚಿತ್ರದುರ್ಗ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು 68 ಸಾಧಕರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಚಿತ್ರದುರ್ಗ ತಾಲ್ಲೂಕಿನ ಹುಣುಸೇಕಟ್ಟೆ ಮೂಲದ ರಂಗಭೂಮಿ ಕ್ಷೇತ್ರದ ರಂಗಭೂಮಿ ಕಲಾವಿದ ಓಬಳೇಶ್, ಸಮಾಜ ಸೇವಾ ಕ್ಷೇತ್ರದ ದೀಲಿಪ್ ಕುಮಾರ್ ಮತ್ತು ಸಂಕೀರ್ಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕ, ರಂಗಭೂಮಿ ಕಲಾವಿದ, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಮೂಲದ ಡಾ. ಹೆಚ್.ಆರ್. ಸ್ವಾಮಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ವಿಷಯವಾಗಿದೆ.

ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಪುರಷರ ಹಾಗೂ 59 ಜನ ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು (Rajyotsava Award 2024 Winners List) ಸರ್ಕಾರ ಇಂದು (ಅಕ್ಟೋಬರ್ 30) ಬಿಡುಗಡೆ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಘೋಷಣೆ ಮಾಡಿದರು.

ಜಾನಪದ ಕ್ಷೇತ್ರ

• ಇಮಾಮಸಾಬ ಎಂ. ವಲ್ಲೆಪನವರ

• ಅಶ್ವ ರಾಮಣ್ಣ

• ಕುಮಾರಯ್ಯ

• ವೀರಭದ್ರಯ್ಯ

• ನರಸಿಂಹಲು (ಅಂಧ ಕಲಾವಿದ)

• ಬಸವರಾಜ ಸಂಗಪ್ಪ ಹಾರಿವಾಳ

• ಎಸ್.ಜಿ. ಲಕ್ಷ್ಮೀದೇವಮ್ಮ

• ಪಿಚ್ಚಳ್ಳಿ ಶ್ರೀನಿವಾಸ

• ಲೋಕಯ್ಯ ಶೇರ (ಭೂತಾರಾಧನೆ)

ಚಲನಚಿತ್ರ-ಕಿರುತೆರೆ

• ಹೇಮಾ ಚೌಧರಿ

• ಎಂಎಸ್ ನರಸಿಂಹಮೂರ್ತಿ

ಸಂಗೀತ ಕ್ಷೇತ್ರ

• ಪಿ ರಾಜಗೋಪಾಲ

• ಎಎನ್​ ಸದಾಶಿವಪ್ಪ

ನೃತ್ಯ: ವಿದುಷಿ ಲಲಿತಾ ರಾವ್,

ಆಡಳಿ ಕ್ಷೇತ್ರ: ಎಸ್​ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ)

ವೈದ್ಯಕೀಯ ಕ್ಷೇತ್ರ: ಡಾ ಜೆಬಿ ಬಿಡನಹಾಳ, ಡಾ ಮೈಸೂರು ಸತ್ಯಾನಾರಾಯಣ. ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ

ಸಮಾಜ ಸೇವೆ: ವೀರಸಂಗಯ್ಯ, ಹೀರಾಚಂದ್ ವಾಗ್ಮರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್.

ಸಂಕೀರ್ಣ ಕ್ಷೇತ್ರ: ಹುಲಿಕಲ್ ನಟರಾಜ್, ಹೆಚ್​ಆರ್​ ಸ್ವಾಮಿ, ಪ್ರಹ್ಲಾದ ರಾವ್, ಕೆ ಅಜಿತ್ ಕುಮಾರ್ ರೈ, ಇರ್ಫಾನ್ ರಜಾಕ್, ವಿರೂಪಾಕ್ಷಪ್ಪ ರಾಮಚಂದ್ರಪ್ಪ ಹಾವನೂರು,

ಹೊರದೇಶ-ಹೊರನಾಡು: ಕನ್ನಯ್ಯ ನಾಯ್ಡು, ಡಾ. ತುಂಬೆ ಮೊಹಿಯುದ್ದೀನ್, ಚಂದ್ರಶೇಖರ್ ನಾಯಕ್

ಪರಿಸರ: ಆಲ್ಮಿತ್ರಾ ಪಟೇಲ್

ಕೃಷಿ: ಶಿವನಾಪುರ ರಮೇಶ, ಪುಟ್ಟೀರಮ್ಮ

ಮಾಧ್ಯಮ: ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಶಿ

ಸಾಹಿತ್ಯ ಕ್ಷೇತ್ರ: ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್

ಶಿಲ್ಪಕಲೆ ಕ್ಷೇತ್ರ: ಶಿಲ್ಪಿ ಅರುಣ್ ಯೋಗಿರಾಜ್ (ಅಯೋಧ್ಯಾ ಬಾಲರಾಮನ ಶಿಲ್ಪಿ)

ವಿಜ್ಞಾನ-ತಂತ್ರಜ್ಞಾನ: ಪ್ರೊ. ಟಿ.ವಿ. ರಾಮಚಂದ್ರ, ಸುಬ್ಬಯ್ಯ ಅರುಣನ್

ಸಹಕಾರ: ವಿರೂಪಾಕ್ಷಪ್ಪ ನೇಕಾರ

ಬಯಲಾಟ: ಸಿದ್ಧಪ್ಪ ಕರಿಯಪ್ಪ(ಅಂಧ ಕಲಾವಿದ), ನಾರಾಯಣಪ್ಪ ಶಿಳ್ಳೇಕ್ಯಾತ

ಯಕ್ಷಗಾನ : ಕೇಶವ್ ಹೆಗಡೆ, ಸೀತಾರಾಮ ತೋಳ್ಪಾಡಿ

ರಂಗಭೂಮಿ: ಸರಸ್ವತಿ ಜುಲೈಕ ಬೇಗಂ, ಓಬಳೇಶ್ ಹೆಚ್.ಬಿ., ಭಾಗ್ಯಶ್ರೀ ರವಿ, ಡಿ. ರಾಮು, ಜನಾರ್ಧನ್ ಹೆಚ್‌., ಹನುಮಾನದಾಸ ವ. ಪವಾರ.

ಸಾಹಿತ್ಯ: ಬಿ.ಟಿ. ಲಿಲಿತಾ ನಾಯಕ್ , ಅಲ್ಲಮಪ್ರಭು ಬೆಟ್ಟದೂರು. ಡಾ. ಎಂ. ವೀರಪ್ಪ ಮೊಯಿಲಿ. ಹನುಮಂತರಾವ್ ದೊಡ್ಡಮನಿ, ಡಾ. ಬಾಳಾಸಾಹೇಬ್ ಲೋಕಾಪುರ, ಬೈರಮಂಗಲ ರಾಮೇಗೌಡ. ಡಾ. ಪ್ರಶಾಂತ್ ಮಾಡ್ತಾ

ಶಿಕ್ಷಣ: ಡಾ. ವಿ. ಕಮಲಮ್ಮ, ಡಾ. ರಾಜೇಂದ್ರ ಶೆಟ್ಟಿ., ಡಾ. ಪದ್ಮಾ ಶೇಖರ್

ಕ್ರೀಡೆ: ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್, ಗೌತಮ್ ವರ್ಮ, ಆರ್‌. ಉಮಾದೇವಿ

ನ್ಯಾಯಾಂಗ: ಬಾಲನ್

ಚಿತ್ರಕಲೆ: ಪ್ರಭು ಹರಸೂರು

ಕರಕುಶಲ: ಚಂದ್ರಶೇಖರ ಸಿರಿವಂತೆ

Share This Article
Leave a Comment

Leave a Reply

Your email address will not be published. Required fields are marked *