ಚಿತ್ರದುರ್ಗ,(ಮೇ.05) : ಪಂಚಮಸಾಲಿ, ಗೌಡ ಲಿಂಗಾಯತ ಮಲೆಗೌಡ ದೀಕ್ಷಾ ಲಿಂಗಾಯತರಿಗೆ 2ಎ ಮೀಸಲಾತಿಯನ್ನು ನೀಡುವಂತೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಮಹಾಸಭಾ ಚಿತ್ರದುರ್ಗ ಘಟಕದವತಿಯಿಂದ ಧರಣಿ ಸತ್ಯಾಗ್ರಹವನ್ನು ನಡೆಸಿ ತಹಶೀಲ್ದಾರ ರವರಿಗೆ ಮನವಿ ಸಲ್ಲಿಸಲಾಯಿತು.
ಪಂಚಮಸಾಲಿ,ಗೌಡ ಲಿಂಗಾಯತ ಮಲೆಗೌಡ ದೀಕ್ಷಾ ಲಿಂಗಾಯತರಿಗೆ 2ಎ ಮೀಸಲಾತಿಯನ್ನು ನೀಡುವಂತೆ ಒತ್ತಾಯಿಸಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು 15 ತಿಂಗಳಿಂದ ನಿರಂತರವಾಗಿ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ. ಇದರಲ್ಲಿ ಪಾದಯಾತ್ರೆ, ಸಮಾವೇಶ, ಬೆಂಗಳೂರಿನಲ್ಲಿ ಸತ್ಯಾಗ್ರಹ, ಶರಾಣಾರ್ಥಿ ಸಂದೇಶ, ಪ್ರತಿಜ್ಞಾ ಪಂಚಾಯತ್ ಅಭೀಯಾನ, ಇದರೊಂದಿಗೆ ಕೂಡಲ ಸಂಗಮ ದೇವಾಲಯದಲ್ಲಿ 14 ದಿನದಿಂದ ನಿರಂತರ ಸತ್ಯಾಗ್ರಹ ಮಾಡುತ್ತಾ ಹಕ್ಕೂತ್ತಾಯ ಮಾಡುತ್ತಿದ್ದಾರೆ.
ಸಮಾಜದವತಿಯಿಂದ 2ಎಗಾಗಿ ಇಷ್ಟೇಲ್ಲಾ ಹೋರಾಟವನ್ನು ಮಾಡುತ್ತಿದ್ದರು ಸಹಾ ಸರ್ಕಾರ ಮಾತ್ರ ಮೌನವಾಗಿದೆ.ಯಾವುದೇ ರೀತಿಯ ಸಕಾರಾತ್ಮಕವಾದ ಉತ್ತರವನ್ನು ನೀಡಿಲ್ಲ, ನಮಗೆ ನ್ಯಾಯವನ್ನು ದೊರಕಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರಕ್ಕೆ ಹಕ್ಕೂತ್ತಾಯ ಪತ್ರವನ್ನು ನೀಡಲಾಗುತ್ತಿದೆ. ಈಗಾಲಾದರೂ ಸರ್ಕಾರ ಎಚ್ಚತ್ತು ನಮ್ಮ ಜನಾಂಗಕ್ಕೆ 2ಎ ಮೀಸಲಾತಿಯನ್ನು ನೀಡುವಂತೆ ಒತ್ತಾಯಿಸಲಾಯಿತು.
ಈ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾಧ್ಯಕ್ಷ ಕೆ.ಸಿ.ಗಂಗಾಧರಪ್ಪ, ವೀರಶೈವ ಲಿಂಗಾಯತ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಮಂಜುನಾಥ್, ಎಸ್.ಟಿ.ನವೀನ್ ಕುಮಾರ್ ಸಮಾಜದ ಮುಖಂಡರಾದ ಎಸ್.ತಿಪ್ಪೇಸ್ವಾಮಿ, ಮನು ತಮಟಕಲ್ಲು, ಶಿವರಾಜ ಜಾಲಿಕಟ್ಟೆ, ಬಿವಿಕೆಎಸ್.ಮೂರ್ತಿ, ಜಿತೇಂದ್ರಕುಮಾರ್ ಹುಲಿಕುಂಟೆ, ನವೀನ್ ಕುಮಾರ್, ಬಸವನಗೌಡ, ನಾಗರಾಜ್, ನಂದೀಪುರ, ವಿಜಯಕುಮಾರ್ ಗಾರೇಹಟ್ಟಿ, ಮಧು ಬದ್ರಿನಾಥ್ ಪ್ರಶಾಂತ್ ರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.