ಗದಗ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ.. ಜನರ ಸ್ಥಿತಿ ಹೇಗಿದೆ ಗೊತ್ತಾ..?

ಗದಗ: ಮುಂಂಗಾರು ಆರು ದಿನ ಮುನ್ನವೇ ಎಲ್ಲೆಡೆ ಆರಂಭವಾಗಿದ್ದು, ಹಲವೆಡೆ ಆರಂಭದಲ್ಲಿಯೇ ಪ್ರವಾಹ ಸ್ಥಿತಿ ಉಂಟಾಗಿದೆ. ಗದಗ ಜಿಲ್ಲೆಯ ರೋಣಾ ತಾಲೂಕಿನ ಬೆಣ್ಣೆ ಹಳ್ಳದಲ್ಲಿ ಪ್ರವಾಹ ಉಂಟಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ.

ಯಾಸ ಹಡಗಲಿ ಹಾಗೂ ಯಾವಗಲ್ ಸಂಪರ್ಕ ಕಲ್ಪಿಸುವ ಬೆಣ್ಣೆ ಹಳ್ಳ ಸೇತುವೆ ಕಾರ್ಯಾರಂಭ ಭರದಿಂದ ಸಾಗಿತ್ತು. ಮಳೆಗಾಲ ಆರಂಭವಾಗಿದ್ದರಿಂದ ಆದಷ್ಟು ಬೇಗ ಮುಗಿಸಬೇಕೆಂಬ ಕಾರಣಕ್ಕೆ ಹಗಲು ರಾತ್ರಿಯೆನ್ನದೆ ಕೆಲಸ ಶುರು ಮಾಡಿದ್ದರು. ಆದರೆ ಬಾರೀ ಮಳೆಯಿಂದಾಗಿ ಸೇತುವೆ ಜಲಾವೃತವಾಗಿದೆ.

ಇಷ್ಟು ದಿನ ಸುರಿದ ಮಳೆಗೆ ಬೆಣ್ಣೆಹಳ್ಳ ಸೇತುವೆಯಲ್ಲಿ ಸಹಜವಾಗಿಯೇ ನೀರಿನ ಹರಿವು ಇತ್ತು. ಆದರೆ ನಿನ್ನೆ ರಾತ್ರಿ ನೀರಿನ ಹರಿವು ಹೆಚ್ಚಾಗಿ ಸೇತುವೆ ಜಲಾವೃತವಾಗಿದೆ. ಈ ವೇಳೆ ನಡುಗಡ್ಡೆಯಲ್ಲಿಯೇ ನಾಲ್ವರು ಕಾರ್ಮಿಕರು ಸಿಕ್ಕಿಬಿದ್ದಿದ್ದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಆ ನಾಲ್ವರನ್ನು ಲೈಫ್ ಜಾಕೆಟ್ ಮೂಲಕ ರಕ್ಷಿಸಿದ್ದಾರೆ.

ಈಗಾಗಲೇ ಕಳೆದ ಕೆಲವು ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಹವಮಾನ ಇಲಾಖೆ ಕೂಡ ಸೂಚನೆ ನೀಡಿದ್ದು, ಎಚ್ಚರದಿಂದಿರಲು ಸೂಚನೆ ನೀಡಿದೆ. ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಕೂಡ ಹಾಕಲಾಗಿದೆ.

Leave a Reply

Your email address will not be published. Required fields are marked *

error: Content is protected !!