ಶಿವಮೊಗ್ಗ: ಇದೇ ತಿಂಗಳ ಅಂದ್ರೆ ಆಗಸ್ಟ್ 31ರಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಡಲಿದೆ. ಶಿವಮೊಗ್ಗಕ್ಕೆ ವಿಮಾನದಲ್ಲಿ ಹೋಗಲು ಜನ ಉತ್ಸುಕರಾಗಿದ್ದಾರೆ. ಹೀಗಾಗಿಯೇ ಮೊದಲ ದಿನವೇ ಟಿಕೆಟ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಅದರ ಜೊತೆಗೆ ಟಿಕೆಟ್ ದರ ಕೂಡ ಹೆಚ್ಚಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಂಚರಿಸುವ ವಿಮಾನದಲ್ಲಿ ಮೊದಲ ದಿನವೇ ಟಿಕೆಟ್ ಭಾರೀ ಪ್ರಮಾಣದಲ್ಲಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದೆ. ಇಂಡಿಗೋ ಸಂಸ್ಥೆಯೂ ವಿಮಾನವನ್ನು ಬಿಡುಗಡೆ ಮಾಡಿದೆ. ಜುಲೈ 26 ರಿಂದ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದೆ.
ಇನ್ನು ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ರಾಷ್ಟ್ರದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ಏಕೈಕ ವಿಮಾನ ನಿಲ್ದಾಣವಾಗಿದೆ. 775 ಎಕರೆಯಲ್ಲಿ ವಿಮಾನ ನಿಲ್ದಾಣ ಸಿದ್ಧತೆ ಮಾಡಲಾಗಿದೆ. ಇನ್ನು ಪ್ರತಿ ಶಿವಮೊಗ್ಗದಿಂದ ಬೆಂಗಳೂರಿಗೆ 2,699 ರೂಪಾಯಿ ಇದೆ. ಆದ್ರೆ ಭಾನುವಾರ ಮಾತ್ರ 14,767 ರೂಪಾಯಿ ಆಗಿದೆ.