ಒನಕೆ ಓಬವ್ವ ವೃತ್ತದಲ್ಲಿ ನಾಮಫಲಕ ಸರಿಪಡಿಸಿ : ಗಣೇಶ್ ಏಕಾಂಗಿ ಪ್ರತಿಭಟನೆ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.02  : ಒನಕೆ ಓಬವ್ವ ವೃತ್ತದಲ್ಲಿ ನಾಮಫಲಕ ತಿರುಗುಮುರುಗಾಗಿ ಕೆಳಗೆ ಬಿದ್ದು ಎರಡು ವರ್ಷಗಳಾಗಿದ್ದರು ಇನ್ನು ಅಳವಡಿಸಿಲ್ಲದಿರುವುದನ್ನು ವಿರೋಧಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಮಂಗಳವಾರ ನಾಮಫಲಕದ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸಿಮೆಂಟ್ ರಸ್ತೆ ನಿರ್ಮಿಸುವಾಗ ಒನಕೆ ಓಬವ್ವ ವೃತ್ತದ ನಾಮಫಲಕವನ್ನು ತೆಗೆಯಲಾಗಿತ್ತು. ಇದುವರೆವಿಗೂ ಮತ್ತೆ ಅಳವಡಿಸಿಲ್ಲದಿರುವುದರಿಂದ ಕೆಲವರು ಇಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಹಾಗಾಗಿ ಒನಕೆ ಓಬವ್ವ ವೃತ್ತದ ನಾಮಫಲಕವನ್ನು ಕೂಡಲೆ ಅಳವಡಿಸುವಂತೆ ಜಿಲ್ಲಾಡಳಿತ, ನಗರಸಭೆಗೆ ಗಣೇಶ್ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks