ಒಂದೇ ಕುಟುಂಬದ ಐವರ ಆತ್ಮಹತ್ಯೆ ಕೇಸ್ : 9 ತಿಂಗಳ ಮಗುವನ್ನು ಕೊಲೆ ಮಾಡಿದ್ದ ಪಾಪಿಗಳು..!

1 Min Read

ಬೆಂಗಳೂರು: ಇನ್ನು ಎಲ್ಲರ ನೆನಪಲ್ಲೂ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಹಾಗೆಯೇ ಉಳಿದಿದೆ ಅನ್ಸುತ್ತೆ. ಯಾಕಂದ್ರೆ ಇಡೀ ರಾಜ್ಯದ ಜನ ಈ ಸುದ್ದಿಯನ್ನ ಆಶ್ಚರ್ಯದಿಂದಲೇ‌ ಗಮನಿಸಿದ್ದರು. ಹಾಗಾಗಿ ಈ ಸುದ್ದಿ ಯಾರ ನೆನಪಿನಂಗಳದಲ್ಲೂ ಮಾಸಿರಲಿಕ್ಕಿಲ್ಲ. ಇದೀಗ ಆ ಕೇಸ್ ಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಪೊಲೀಸರು.

2 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದರು. ಭವ್ಯ ಬಂಗಲೆ, ಕೈತುಂಬಾ ಹಣಕಾಸು ಇದ್ದರು ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಡರಹಳ್ಳಿ ಪೊಲೀಸರು ಈ ಪ್ರಕರಣದ ಹಿಂದೆ ಬಿದ್ದಿದ್ದರು. ಇದೀಗ ಆ ಕೇಸ್ ಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 400 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ, ಆತ್ಮಹತ್ಯೆಗೆ ಮನೆ ಮಾಲೀಕ ಶಂಕರ್ ಹಾಗೂ ಅಳಿಯಂದಿರು ಪ್ರಚೋದನೆ ನೀಡಿದ್ದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಆಡಿಯೋ, ವಿಡಿಯೋ ಸಾಕ್ಷಿಗಳನ್ನ ಕಲೆ ಹಾಕಲಾಗಿದೆ. ಜೊತೆಗೆ ಮಧುಕರ್ ಡೆತ್ ನೋಟ್ ನಲ್ಲಿ ಬರೆದಿದ್ದ ತಂದೆ ಶಂಕರ್ ಬಗೆಗಿನ ಆರೋಪಗಳನ್ನು ಸಾಕ್ಷಿಯಾಗಿ ಪರಿಗಣಿಸಿದ್ದು, ಅದನ್ನು ಕೋರ್ಟ್ ಗೆ ನೀಡಿದ್ದಾರೆ.

ಇನ್ನು ಆ 9 ತಿಂಗಳ ಕಂದಮ್ಮ ಹಸಿವಿನಿಂದ ಸಾವನ್ನಪ್ಪಿತ್ತು ಎನ್ನಲಾಗಿತ್ತು. ಆದ್ರೆ ಎಫ್ಎಸ್ಎಲ್ ವರದಿ ಬಂದಿದ್ದು, ಆ ಮಗುವನ್ನು ಕೊಲೆ ಮಾಡಿ, ಸಾಯಿಸಲಾಗಿದೆ‌ ಎನ್ನುತ್ತಿದೆ ವರದಿ. ಸದ್ಯ ಆರೋಪಿ ಸ್ಥಾನದಲ್ಲಿದಲ್ಲಿರುವ ಹಲ್ಲಗೆರೆ ಶಂಕರ್,‌ ಅಳಿಯಂದಿರು ಜೈಲಿನಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *